Publish Date: Sat, 28 Jun 2025 (14:07 IST)
Updated Date: Sat, 28 Jun 2025 (14:09 IST)
ಬೆಂಗಳೂರು: ಮೊನ್ನೆಯಷ್ಟೇ ಸೆಪ್ಟೆಂಬರ್ ಬಳಿಕ ರಾಜ್ಯ ರಾಜಕೀಯದಲ್ಲಿ ಕ್ರಾಂತಿಯಾಗಲಿದೆ ಎಂದು ಸಚಿವ ಕೆಎನ್ ರಾಜಣ್ಣಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದರು. ಇದೀಗ ಸಿದ್ದರಾಮಯ್ಯ ಇಲ್ಲದಿದ್ದರೆ ನಾನಿಲ್ಲ ಎಂದಿದ್ದಾರೆ.
ಕ್ರಾಂತಿ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಕೆಎನ್ ರಾಜಣ್ಣ ಅವರನ್ನು ಸಮರ್ಥಿಸಿ ಮಾತನಾಡಿದ್ದರು. ವಿಶ್ಲೇಷಣೆ ನಡೆಸಲು ನಾನು ಪತ್ರಕರ್ತ ಎಂದಿದ್ದರು. ಇದೀಗ ಕೆಎನ್ ರಾಜಣ್ಣ ಕೂಡಾ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ.
ಸಿದ್ದರಾಮಯ್ಯ ಇರುವುದರಿಂದಲೇ ನಾನು ರಾಜಕಾರಣ ಮಾಡುತ್ತಿರುವುದು. ಅವರಿಲ್ಲದೇ ಇದ್ದರೆ ನಾನಿಲ್ಲ. ಅವರಿಲ್ಲದಿದ್ದರೆ ರಾಜಕೀಯವನ್ನೇ ಬಿಡುತ್ತೇನೆ ಎಂದು ಹೇಳಿದ್ದಾರೆ. ನನ್ನ ಪ್ರಕಾರ ಕಾಂಗ್ರೆಸ್ ನಲ್ಲಿ ಮೂರು ಪವರ್ ಸೆಂಟರ್ ಇದೆ. ಹೈಕಮಾಂಡ್, ಕೆಪಿಸಿಸಿ ಮತ್ತು ಸಿಎಂ. ಸಿಎಂ ಬದಲಾವಣೆಯನ್ನು ಕಾಲವೇ ನಿರ್ಧರಿಸಲಿದೆ ಎಂದಿದ್ದಾರೆ.
ಕ್ರಾಂತಿ ಎಂದರೆ ನಾಯಕತ್ವ ಬದಲಾವಣೆ ಎಂದೇ ಯಾಕೆ ಅಂದುಕೊಳ್ಳಬೇಕು? ಹಸಿರು ಕ್ರಾಂತಿಯೂ ಆಗಬಹುದು. ಬಿಜೆಪಿಯಲ್ಲೂ ಕ್ರಾಂತಿಯಾಗುತ್ತಿದೆ. ರಾಜಕಾರಣದಲ್ಲಿ ಬದಲಾವಣೆಯ ಪರ್ವ ಸಹಜ ಎಂದಿದ್ದಾರೆ.