Select Your Language

Notifications

webdunia
webdunia
webdunia
webdunia

ಮಂತ್ರಿ ಮಾಲ್ ಗೆ ಬೀಗ ಜಡಿದ ಬಿಬಿಎಂಪಿ

ಮಂತ್ರಿ ಮಾಲ್ ಗೆ ಬೀಗ ಜಡಿದ ಬಿಬಿಎಂಪಿ
bangalore , ಗುರುವಾರ, 30 ಸೆಪ್ಟಂಬರ್ 2021 (21:26 IST)
ಬೆಂಗಳೂರು: ಬಿಬಿಎಂಪಿ ಕಂದಾಯ ಬಾಕಿ ಉಳಿಸಿಕೊಂಡ ಹಿನ್ನೆಲೆ ಪಶ್ಚಿಮ ವಲಯ ಅಧಿಕಾರಿಗಳು ಮಾಲ್ ಗೆ ಬೀಗ ಜಡಿದರು. ಎಚ್ಚತ್ತ ಮಾಲ್ ಮಾಲೀಕರು 5 ಕೋಟಿ ರೂ. ಕಂದಾಯ ಪಾವತಿಸಿದ್ದು, ತೆರೆಯಲು ಅವಕಾಶ ನೀಡಲಾಯಿತು.
ಮಂತ್ರಿ ಮಾಲ್ ಬರೋಬ್ಬರಿ 39 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಕೇವಲ 5 ಕೋಟಿ ರೂ. ಡಿಡಿ ಪಾವತಿ ಮಾಡಿದ ಕೂಡಲೇ ಬೀಗ ತೆರೆಯಲು ಅವಕಾಶ ಕೊಟ್ಟಿದೆ. ಬಿಬಿಎಂಪಿಯ ಈ ನಡೆ ಸಾರ್ವಜನಿಕರ ಟೀಕೆಗೆ ಒಳಗಾಗಿದೆ.
2017 ರಿಂದಲೂ ಮಂತ್ರಿ ಮಾಲ್ ತೆರಿಗೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದೆ. ಬಡ್ಡಿ ಹಣವೂ ಸೇರಿ 39 ಕೋಟಿ ರೂ ಬಾಕಿಯಾಗಿದೆ. ಹಲವು ಬಾರಿ ನೋಟಿಸ್​ ನೀಡಿದರೂ ಕ್ಯಾರೆ ಎನ್ನದ ಮಂತ್ರಿ ಮಾಲ್ ಆಡಳಿತ ವರ್ಗಕ್ಕೆ ಈ ಹಿಂದೆಯೂ ಬೀಗ ಹಾಕಿ ಬಿಸಿ ಮುಟ್ಟಿಸಲಾಗಿತ್ತು. ತೆರಿಗೆ ಕಟ್ಟುವುದಾಗಿ ಮುಚ್ಚಳಿಕೆ ಬರೆದುಕೊಟ್ಟ ಬಳಿಕ ತೆರೆಯಲು ಅನುಮತಿಸಿದ್ದರು‌. ಗುರುವಾರ ಮತ್ತೆ ತೆರಿಗೆ ಸಂಗ್ರಹ ಅಭಿಯಾನದ ಭಾಗವಾಗಿ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್​ಗೆ ಬೀಗ ಹಾಕಿ, ಸ್ವಲ್ಪ ತೆರಿಗೆ ಪಾವತಿಸಿದ ಬಳಿಕ ತೆರೆಯಲು ಅವಕಾಶ ಕೊಟ್ಟರು.
Photo Courtesy: Google

Share this Story:

Follow Webdunia kannada

ಮುಂದಿನ ಸುದ್ದಿ

ಶೈಕ್ಷಣಿಕ ದಾಖಲೆಗಳ ಡಿಜಿಟಲ್ ಭಂಡಾರ (ಎನ್.ಎ.ಡಿ) ನೋಂದಣಿ ಪ್ರಕ್ರಿಯೆ