Publish Date: Tue, 01 Oct 2019 (12:33 IST)
Updated Date: Tue, 01 Oct 2019 (12:34 IST)
ಬೆಂಗಳೂರು: ಬಿಬಿಎಂಪಿಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಸ್ಥಳಕ್ಕೆ ಆಗಮಿಸಿದ ಅನರ್ಹ ಶಾಸಕ ಮುನಿರತ್ನಗೆ ಪೊಲೀಸರು ಒಳಗೆ ಹೋಗಲು ಅನುಮತಿ ನೀಡದ ಘಟನೆ ನಡೆದಿದೆ.
ಪಾಸ್ ಇಲ್ಲದ ಕಾರಣಕ್ಕೆ ಕಾಂಗ್ರೆಸ್ ನಾಯಕ, ಅನರ್ಹ ಶಾಸಕ ಮುನಿರತ್ನಗೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಬಿಬಿಎಂಪಿ ಕೌನ್ಸಿಲ್ ಸಭಾಂಗಣದೊಳಗೆ ಪ್ರವೇಶಿಸಲು ಪೊಲೀಸರು ಅನುಮತಿ ನೀಡಲಿಲ್ಲ. ಸಚಿವ ಅಶ್ವತ್ಥ್ ನಾರಾಯಣ್ ಜತೆಗೆ ಸ್ಥಳಕ್ಕೆ ಆಗಮಿಸಿದ ಮುನಿರತ್ನಗೆ ಪೊಲೀಸರು ಒಳ ಹೋಗಲು ಅನುಮತಿ ನೀಡಲಿಲ್ಲ. ಹೀಗಾಗಿ ಮುನಿರತ್ನ ಅನಿವಾರ್ಯವಾಗಿ ಹೊರಗುಳಿಯಬೇಕಾಯಿತು.