Publish Date: Tue, 01 Oct 2019 (12:27 IST)
Updated Date: Tue, 01 Oct 2019 (12:28 IST)
ಬೆಂಗಳೂರು: ಬಿಬಿಎಂಪಿಯ ನೂತನ ಮೇಯರ್ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ನ ಒಮ್ಮತದ ಅಭ್ಯರ್ಥಿ ಪೈಕಿ ಯಾರ ಕೈ ಮೇಲಾಗುತ್ತದೆ ಎಂಬ ನಿರೀಕ್ಷೆ ಮೂಡಿದೆ.
ಬಿಬಿಎಂಪಿ ಕೌನ್ಸಿಲ್ ಸಭಾಂಗಣದಲ್ಲಿ ಮತ ಪ್ರಕ್ರಿಯೆ ನಡೆಯುತ್ತಿದೆ. ಗೌತಮ್ ಕುಮಾರ್ ಬಿಜೆಪಿ ಮೇಯರ್ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ಇದೀಗ ಬಿಜೆಪಿ ಅಭ್ಯರ್ಥಿ ಪರವಾಗಿ ಯಾರೆಲ್ಲಾ ಮತ ಹಾಕಿದ್ದಾರೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.
ಆರ್ ಸತ್ಯನಾರಾಯಣ ಕಾಂಗ್ರೆಸ್ ನ ಮೇಯರ್ ಅಭ್ಯರ್ಥಿಯಾಗಿದ್ದಾರೆ. ಸಹಜವಾಗಿಯೇ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಅವಕಾಶವಿದೆ. ಮೊದಲು ಕೈ ಎತ್ತುವ ಮೂಲಕ ಮತ ಪಡೆಯಲಾಯಿತು. ಇದಾದ ಬಳಿಕ ಉಪ ಮೇಯರ್ ಸ್ಥಾನಕ್ಕೆ ಮತ ಪ್ರಕ್ರಿಯೆ ನಡೆಯಲಿದೆ.