Publish Date: Sat, 28 Sep 2019 (11:44 IST)
Updated Date: Sat, 28 Sep 2019 (11:45 IST)
ಬೆಂಗಳೂರು : ಬಿಬಿಎಂಪಿ ಮೇಯರ್ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ಅನರ್ಹ ಶಾಸಕರಿಂದ ಹೊಸ ತಲೆನೋವು ಶುರುವಾಗಿದೆ.
ಈಗಾಗಲೇ ಮೇಯರ್ ಆಯ್ಕೆ ವಿಚಾರದಲ್ಲಿ ಬಿಜೆಪಿ ಶಾಸಕರ ನಡುವೆ ಲಾಬಿ ಶುರುವಾಗಿದ್ದು, ಈ ನಡುವೆ ಇದೀಗ ಅನರ್ಹ ಶಾಸಕರೂ ಕೂಡ ಮೇಯರ್ ಆಯ್ಕೆಯಲ್ಲಿ ನಮ್ಮನ್ನ ಕಡೆಗಣಿಸುವ ಹಾಗಿಲ್ಲ ಎಂದು ಹೇಳುವುದರ ಮೂಲಕ ಬಿಜೆಪಿಗೆ ಮತ್ತೊಂದು ತಲೆನೋವು ತಂದಿಟ್ಟಿದ್ದಾರೆ.
ಮೇಯರ್ ಆಯ್ಕೆಯಲ್ಲಿ ನಮ್ಮನ್ನ ಕಡೆಗಣಿಸುವ ಹಾಗಿಲ್ಲ. ನಮ್ಮನ್ನ ನಿರ್ಲಕ್ಷ್ಯ ಮಾಡುವಂತಿಲ್ಲ, ಬಿಬಿಎಂಪಿ ಮೇಯರ್ ಆಯ್ಕೆಯಲ್ಲಿ ನಾವೂ ಕೂಡ ಭಾಗಿಯಾಗಬೇಕು. ನಮ್ಮ ಅಭಿಪ್ರಾಯ ಕೇಳಿಯೇ ಮೇಯರ್ ಆಯ್ಕೆ ಮಾಡಿ ಎಂದು ಅನರ್ಹ ಶಾಸಕರು ಹೇಳಿದ್ದಾರೆ ಎನ್ನಲಾಗಿದೆ.
ಹಾಗೇ ಬಿಜೆಪಿ ಪಕ್ಷ ಸೂಚಿಸಿರೋ ಅಭ್ಯರ್ಥಿಗೆ ಬೆಂಬಲ ನೀಡಬೇಕಾ ಅಥವಾ ತಮ್ಮ ಕ್ಷೇತ್ರದ ಬಿಜೆಪಿ ಕಾರ್ಪೋರೇಟರ್ ಬೆಂಬಲಿಸಬೇಕಾ ಎಂಬ ಬಗ್ಗೆ ಇಂದು ಅನರ್ಹ ಶಾಸಕರು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.