Select Your Language

Notifications

webdunia
webdunia
webdunia
webdunia

ಪಶ್ಚಿಮ ವಲಯಕ್ಕೆ ಭೇಟಿ ನೀಡಿ ಖುದ್ದು ಸಮಸ್ಯೆ ಆಲಿಸಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

ಪಶ್ಚಿಮ ವಲಯಕ್ಕೆ ಭೇಟಿ ನೀಡಿ ಖುದ್ದು ಸಮಸ್ಯೆ ಆಲಿಸಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್
bangalore , ಮಂಗಳವಾರ, 18 ಅಕ್ಟೋಬರ್ 2022 (14:36 IST)
ಮುಖ್ಯ ಆಯುಕ್ತರು ಪಶ್ಚಿಮ ವಲಯದ ಕಾಲ್ನಡಿಗೆಯ ಮುಖಾಂತರ ಸಮಸ್ಯೆಗಳ ಖುದ್ದು ಆಲಿಸಿದರು.ಸಂಬಂಧಪಟ್ಟ ಅಧಿಕಾರಿಗಳು ಜೊತೆಗೆ ವಾಟಾಳ್ ನಾಗರಾಜ್ ರಸ್ತೆ, ಡಾ. ರಾಜ್ ಕುಮಾರ್ ರಸ್ತೆ ವೀಕ್ಷಿಸಿದರು.ವಾಟಾಳ್ ನಾಗರಾಜ್ ರಸ್ತೆಯನ್ನು ಮಿಲ್ಲಿಂಗ್ ಮಾಡಿ ರಸ್ತೆಯನ್ನು ಸರಿಪಡಿಸುವಂತೆ ಸೂಚನೆ ನೀಡಲಾಗಿದೆ.
 
ಲೂಲು, ಮುಂಭಾಗದ ಪಾದಚಾರಿ ಮಾರ್ಗದ ಒತ್ತುವರಿ ಸೂಚನೆಯನ್ನು ತಿಳಿಸಲಾಗಿದೆ. ಮಾರ್ಗಅಲ್ಲದೇ ಪಾದಚಾರಿ ರಸ್ತೆ ದುರಸ್ತಿಗೆ ಮತ್ತು ಚರಂಡಿಯನ್ನು ಸರಿಪಡಿಸಲು ಬ್ಯಾರಿಕೇಟ್ ಅನ್ನು ಸ್ಥಾಪಿಸಲು ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಸೂಚಿಸುವಂತೆ, ನೀರು ಹೋಗು ಅಗಲವಾದ ಪೈಪ್ ಹಾಕುವಂತೆ ಮಾಡಲಾಗಿದೆ.ಅಲ್ಲದೇ ಸುಜಾತ ಟಾಕೀಸ್ ಮುಂಭಾಗದ ಗೋಡೆಯ ಮೇಲೆ ಆಂಟಿಸಿರುವ ಪೋಸ್ಟರ್ ಅನ್ನು ಸೂಚಿಸುವಂತೆ ಸೂಚನೆ ನೀಡಲಾಗಿದೆ.
 
ಈ ವೇಳೆ ವಲಯ ಆಯುಕ್ತರಾದ ಡಾ. ದೀಪಕ್, ವಲಯ ಜಂಟಿ ಆಯುಕ್ತರಾದ ಯೋಗೇಶ್, ವಲಯ ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ವಲಯ ಮುಖ್ಯ ಅಭಿಯಂತರರಾದ ದೊಡ್ಡಯ್ಯ, ವಿದ್ಯುತ್, ಅರಣ್ಯ, ಘನತ್ಯಾಜ್ಯ ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿಗಳು.
 

Share this Story:

Follow Webdunia kannada

ಮುಂದಿನ ಸುದ್ದಿ

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ‌ ಅಗ್ನಿ ಅವಘಡ