Publish Date: Sat, 15 Oct 2022 (20:41 IST)
Updated Date: Sat, 15 Oct 2022 (20:43 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯದ ಬೆಳತೂರು ವ್ಯಾಪ್ತಿಯಲ್ಲಿ ಇಂದು 2 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ.ಫ್ರೈಮ್ ಮ್ಯಾನ್ಸನ್ ಅಪಾರ್ಟ್ಮೆಂಟ್ ನಿಂದ ಸುಮಾರು 50 ಮೀಟರ್ ಉದ್ದದ ಮಳೆ ನೀರುಗಾಲುವೆಯ ಮೆಲೆ ಕಾಂಪೌಂಡ್ ಗೋಡೆಯನ್ನು ನಿರ್ಮಿಸಿಕೊಂಡಿದ್ದು, ಭೂಮಾಪಕರು ಮಾರ್ಕಿಂಗ್ ಮಾಡಿರುವ ಪ್ರಕಾರ ಇಂದು ಸುಮಾರು 50 ಮೀಟರ್ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ.
ಇನ್ನು LBI BLISS ಅಪಾರ್ಟ್ಮೆಂಟ್ ನಿಂದ ಒತ್ತುವರಿ ಮಾಡಿಕೊಂಡಿದ್ದ 10 ಮೀಟರ್ ಉದ್ದದ ಮಳೆ ನೀರುಗಾಲುವೆ ಜಾಗವನ್ನು ಕೂಡಾ ತೆರವುಗೊಳಿಸಲಾಗಿದೆ.
ವಲಯ ಮುಖ್ಯ ಅಭಿಯಂತರರಾದ ಬಸವರಾಜು ಕಬಾಡೆ ರವರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಸದರಿ ಕಾರ್ಯಾಚರಣೆಯಲ್ಲಿ ಪಾಲಿಕೆ ಇಂಜಿನಿಯರ್ ಗಳು, 20 ಪೊಲೀಸ್ ಅಧಿಕಾರಿಗಳು, 5 ಮಾರ್ಷಲ್ ಗಳಿದ್ದರು. ತೆರವು ಕಾರ್ಯಾಚರಣೆಗೆ 2 ಜೆಸಿಬಿ ಯಂತ್ರಗಳನ್ನು ಬಳಸಿಕೊಳ್ಳಲಾಗಿದ್ದು, ಟ್ರ್ಯಾಕ್ಟರ್ ಮೂಲಕ ಕಟ್ಟಡದ ಭಗ್ನಾವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ.