Select Your Language

Notifications

webdunia
webdunia
webdunia
webdunia

ಕಾನೂನಿನ‌ ಅಡಿಯಲ್ಲಿ ಸೆಂಟಿಮೆಂಟ್ಗೆ ಅವಕಾಶ ಇಲ್ಲ

Sentiment is not allowed under law
ಗಂಡ ಹೆಂಡತಿ ಆತ್ಮಹತ್ಯೆ ಯತ್ನ ವಿಚಾರವಾಗಿ ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಸವರಾಜ ಕಬಾಡೆ ಪ್ರತಿಕ್ರಿಯಿಸಿದ್ದಾರೆ.ನಿನ್ನೆಯಿಂದಲೂ ದಂಪತಿ ಇದೇರೀತಿ ಮಾಡ್ತಿದ್ದಾರೆ.ಕಾನೂನಿನಲ್ಲಿ ಸೆಂಟಿಮೆಂಟ್ಗೆ ಅವಕಾಶ ಇಲ್ಲ.ಇಲ್ಲಿ ಈ ಹಿಂದೆ ಮಗು ಕೂಡಾ ಕೊಚ್ಚಿಹೋಗಿತ್ತು.ಹೀಗಾಗಿ ರಾಜಕಾಲುವೆ ಮಾಡಲೇಬೇಕು.ಅವರು ಈ ರೀತಿ ಮಾಡ್ಬಾರ್ದು. ಅವರ ಮನೆ ಬಿಡೋಕೆ ಸಾಧ್ಯವಿಲ್ಲ.ಒಂದು ಮನೆ ಬಿಟ್ರೆ ಬೇರೆಯವ್ರು ಬಿಡ್ತಾರಾ.ಸದ್ಯಕ್ಕೆ ಅವ್ರನ್ನ ಅಲ್ಲಿಂದ ಕರೆತರಲು ಪ್ರಯತ್ನ ಮಾಡ್ಯಿದ್ದೀವಿ.ಬಳಿಕ ಕಾರ್ಯಾಚರಣೆ ಮಾಡ್ತಿವಿ ಎಂದು ಬಸವರಾಜ ಕಬಾಡೆ ಹೇಳಿದಾರೆ.
 
ಇತ್ತಾ ಮನೆ ಮಾಲೀಕ ಸುನೀಲ ಸಿಂಗ್ ಹಾಗೂ ಸೋನಾ ಸೇನ್ ರಾಜಕಾಲುವೆ ಮೇಲೆ ಮನೆ ನಿರ್ಮಾಣ ಆಗಿದೆ ಅಂತ ಬಿಬಿಎಂಪಿ ಮಾರ್ಕ್ ಮಾಡಿದೆ.2 ಮೀಟರ್ ಒತ್ತುವರಿ ಆಗಿದೆ ಅಂತ ಮಾರ್ಕ್ ಮಾಡಿದ್ದಾರೆ.ಕಾಂಪೌಂಡ್, ಮನೆ ಸೇರಿ 2 ಮೀಟರ್ ತೆರವು ಮಾಡೋಕೆ ಅಧಿಕಾರಿಗಳು ಮುಂದಾಗಿದ್ದಾರೆ.ಸಿಎಂ ಇಲ್ಲಿಗೆ ಬರಲೇಬೇಕು ಅಂತ  ಮನೆಮಾಲೀಕರು ಹಠ ಹಿಡಿದಿದ್ದು,ಹತ್ತು ವರ್ಷದ ಹಿಂದೆ ಮನೆ ಕಟ್ಟಿಕೊಂಡಿದ್ದೇವೆ .ನಲವತ್ತು ಲಕ್ಷ ಬ್ಯಾಂಕ್ ಲೋನ್ ಪಡೆದಿದ್ದೇವೆ.ಬಿಬಿಎಂಪಿಯಿಂದ ತಹಶಿಲ್ದಾರ್ ಅಧಿಕಾರಿಗಳಿಗೆ ಮನೆ ಒಡೆಯದಂತೆ ಮನವಿ ಮಾಡಿಕೊಂಡಿದ್ದೇವೆ.ಆದರೆ ಯಾರು ಸ್ಪಂದಿಸುತ್ತಿಲ್ಲ ಮನೆ ಉಳಿಸಿಕೊಡಿ ಎಂದು ಕಣ್ಣೀರು ಹಾಕ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಯುಕ್ತಕ್ಕೆ ದೂರು ನೀಡಿದ ಎನ್ ಆರ್ ರಮೇಶ್