Select Your Language

Notifications

webdunia
webdunia
webdunia
webdunia

ಎರಡನೇ ದಿನವೂ ಬಿಲ ಸೇರಿದ ಬಿಬಿಎಂಪಿ ಬುಲ್ಡೋಜರ್ಸ್

BBMP bulldozers join the trench on the second day
bangalore , ಶುಕ್ರವಾರ, 14 ಅಕ್ಟೋಬರ್ 2022 (19:38 IST)
ಒತ್ತುವರಿ ತೆರವು ಕಾರ್ಯಾಚರಣೆಗೆ ನಿನ್ನೆಯಂತೆ ಇಂದೂ ಕೂಡ ಬ್ರೇಕ್ ಕೊಡಲಾಗಿದೆ.ಕಳೆದ ಮೂರು ದಿನಗಳಿಂದ ನಡೆಯುತ್ತಾ ಇದ್ದ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದೆ.ಆರಂಭಿಕ ಮೂರು ದಿನ ಮಹಾದೇವಪುರ, ಕೆ.ಆರ್ ಪುರಂನಲ್ಲಿ ಘರ್ಜಿಸಿದ್ದ ಜೆಸಿಬಿಗಳು ದೊಡ್ಡವರ ಅಖಾಡದಲ್ಲಿ ಘರ್ಜಿಸದೇ ಬಡವರ ಮನೆ ಕೆಡವಿ ಬಿಬಿಎಂಪಿ ಸೈಲೆಂಟ್ ಆಗಿದೆ.ಈಗಾಗಲೇ ಕಂದಾಯ ಇಲಾಖೆ ಗುರುತು ಮಾಡಿರುವಷ್ಟೂ ತೆರವು ಮಾಡಲಾಗಿದೆ ಎನ್ನುತ್ತಿರುವ ಪಾಲಿಕೆ.ಇನ್ನು ಕೋರ್ಟ್ ಸೂಚನೆಯಂತೆ ಸ್ಟೇ ತಂದವರ ಜಂಟಿ ಸರ್ವೇ ನಡೆಯಬೇಕು ಅಂತಾ ಬಿಬಿಎಂಪಿ ಹೇಳ್ತಿದೆ.ಅದಕ್ಕೆ ಇನ್ನೂ ಕಾಲವಕಾಶ ಬೇಕು ಎನ್ನುತ್ತಿರುವ ಬಿಬಿಎಂಪಿ ಅಧಿಕಾರಿಗಳು.ಹೀಗಾಗಿ ಇಂದೂ ಕೂಡ ಒತ್ತುವರಿ ತೆರವು ಕಾರ್ಯಾಚರಣೆ ನಡೆಯೋದು ಡೌಟ್ ಆಗಿದೆ.ಐದನೇ ದಿನಕ್ಕೆ ಕಾಲಿಡ್ತದ್ದಂತೆ  ಬಿಬಿಎಂಪಿ ಬುಲ್ಡೋಜರ್ ಗಳು ಕಂಪ್ಲೀಟ್ ಸೈಲೆಂಟ್ ಆಗಿದೆ.ಬಡವರ ಮುಂದೆ ಪೌರುಷ ತೋರಿ ದೊಡ್ಡವರ ಆಸ್ತಿ ಕೆಡವಲು ಪಾಲಿಕೆ ಹಿಂದೇಟು ಹಾಕುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಈದ್ ಮಿಲಾದ್ ಗೆ ಲಾಂಗೂ ಮಚ್ಚು ಹಿಡಿದು ಹುಡುಗರ ಡ್ಯಾನ್ಸ್