Select Your Language

Notifications

webdunia
webdunia
webdunia
webdunia

ಅಪಘಾತಗಳಿಗೆ ಬೆಂಗಳೂರು ವಿವಿಯೇ ಕಾರಣ

Bangalore University is responsible for the accidents
bangalore , ಸೋಮವಾರ, 17 ಅಕ್ಟೋಬರ್ 2022 (15:31 IST)
ಬೆಂಗಳೂರು ವಿವಿ ಆವರಣದಲ್ಲಿ ಅವೈಜ್ಞಾನಿಕ ರಸ್ತೆ ಹಂಪ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿವಿ ರಿಜಿಸ್ಟ್ರಾರ್​ಗೆ ಬಿಬಿಎಂಪಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ರಸ್ತೆ ಅಪಘಾತವಾಗುತ್ತಿದೆ. ರಸ್ತೆ ಹಂಪ್ ನಿರ್ಮಿಸಿದ ಕಾರಣಕ್ಕಾಗಿ ಅಪಘಾತಗಳು ಹೆಚ್ಚಾಗ್ತಿದೆ. ಅದನ್ನು ಸರಿಪಡಿಸುವಂತೆ ಕುಲಸಚಿವರಿಗೆ ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಜಯಸಿಂಹ ಪತ್ರ ಬರೆದಿದ್ದಾರೆ. ಭಾರತೀಯ ರಸ್ತೆ ಕಾಂಗ್ರೆಸ್‌ನ ನಿಯಮದಂತೆ ನಿರ್ಮಾಣವಾಗಿಲ್ಲ.. ಹೀಗಾಗಿ ಬೆಂಗಳೂರು ವಿವಿ ಆವರಣದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಈ ಕೂಡಲೇ ಅವೈಜ್ಞಾನಿಕ ರಸ್ತೆ ಹಂಪ್‌ಗಳನ್ನು ತೆರವು ಮಾಡಿ .ವೈಜ್ಞಾನಿಕವಾಗಿ ಉಬ್ಬುಗಳನ್ನು ನಿರ್ಮಿಸಬೇಕು. ಜತೆಗೆ ಬೆಂಗಳೂರು ವಿವಿ ಆವರಣದಲ್ಲಾಗುತ್ತಿರುವ ಅಪಘಾತಕ್ಕೆ ಬೆಂಗಳೂರು ವಿವಿ ಆಡಳಿತವೇ ಕಾರಣ. ಬಿಬಿಎಂಪಿ ಕಾರಣವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಕಚೇರಿಯಲ್ಲಿ ಮತದಾನ ಮಾಡಿದ ಡಿಕೆಶಿ