Publish Date: Sat, 19 Oct 2019 (12:19 IST)
Updated Date: Sat, 19 Oct 2019 (12:43 IST)
ವಿಜಯಪುರ: ಪಕ್ಷದ ವಿರೋಧ ಮಾತನಾಡಿದ್ದಕ್ಕೆ ವಿಜಯಪುರ ನಗರದ ಶಾಸಕ ಬಸನಗೌಡ ಯತ್ನಾಳ್ ಗೆ ಶೋಕಾಸ್ ನೀಡಿದ ಹಿನ್ನಲೆಯಲ್ಲಿ ಇದೀಗ ಯತ್ನಾಳ್ ಈ ನೋಟಿಸ್ ಗೆ ಉತ್ತರ ನೀಡಿದ್ದಾರೆ.
ಅಕ್ಟೋಬರ್ 15 ರಂದು ರಿಜಿಸ್ಟರ್ಡ್ ಪೋಸ್ಟ್, ಇ-ಮೇಲ್ ಮೂಲಕ ಶೋಕಾಸ್ ನೋಟಿಸ್ ಗೆ ಉತ್ತರ ನೀಡಿರುವ ಯತ್ನಾಳ್ , ನಾನು ಪಕ್ಷದ ವಿರುದ್ಧವಾಗಿ ಮಾತನಾಡಿಲ್ಲ. ಶಾಸಕನಾಗಿ, ಸಂಸದನಾಗಿ ಕೆಲಸ ಮಾಡಿದ ಅನುಭವವಿದೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ನನ್ನದಾಗಿರಲಿಲ್ಲ. ರಾಜ್ಯಸ ನೆರೆ ಸಂತ್ರಸ್ತರ ಸ್ಥಿತಿ ನನಗೆ ಕಣ್ಣೀರು ತರಿಸಿತ್ತು. ಹೀಗಾಗಿ ನಾನು ನೆರೆಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ್ದೇನೆ ಎಂದು ಹೇಳಿದ್ದಾರೆ.
ಅಲ್ಲದೇ ಮಾಧ್ಯಮಗಳಲ್ಲಿನ ವರದಿ ಮಾನಸಿಕ ನೋವು ಕೊಟ್ಟಿತ್ತು. ಹೀಗಾಗಿ ಕೇಂದ್ರದ ಗಮನಕ್ಕೆ ತರುವಂತೆ ನಾನು ಹೇಳಿದ್ದೇನೆ, ಹಿರಿಯನಾಗಿ ನಮ್ಮ ಸಂಸದರಿಗೆ ತಿಳಿಸಿದ್ದೇನೆ. ನನ್ನ ಈ ಹೇಳಿಕೆಯಲ್ಲಿ ಯಾವುದೇ ಬೇರೆ ಉದ್ದೇಶವಿರಲಿಲ್ಲ. ನನ್ನ ಹೇಳಿಕೆ ಸರಿಯಾಗಿಲ್ಲ ಅಂದ್ರೆ ವಿಷಾದ ವ್ಯಕ್ತಪಡಿಸ್ತೇನೆ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.