Select Your Language

Notifications

webdunia
webdunia
webdunia
webdunia

ಶಾಸಕ ಯತ್ನಾಳ್ ಗೆ ನೋಟಿಸ್ ನೀಡಿದ ಹಿನ್ನಲೆ; ಪಕ್ಷದಿಂದ ಹೊರಬರುವಂತೆ ಅಭಿಮಾನಿಗಳಿಂದ ಕರೆ

ಶಾಸಕ ಯತ್ನಾಳ್ ಗೆ ನೋಟಿಸ್ ನೀಡಿದ ಹಿನ್ನಲೆ; ಪಕ್ಷದಿಂದ ಹೊರಬರುವಂತೆ ಅಭಿಮಾನಿಗಳಿಂದ ಕರೆ
ಬೆಂಗಳೂರು , ಶನಿವಾರ, 5 ಅಕ್ಟೋಬರ್ 2019 (10:30 IST)
ಬೆಂಗಳೂರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ನೋಟಿಸ್ ನೀಡಿದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ಧ ಯತ್ನಾಳ್ ಅಭಿಮಾನಿಗಳು ಕಿಡಿಕಾರಿದ್ದಾರೆ.




ರಾಜ್ಯಕ್ಕೆ ನೆರೆ ಪರಿಹಾರ ತರುವಲ್ಲಿ ಬಿಜೆಪಿ ಪಕ್ಷದ ಸಂಸದರು ಮತ್ತು ಕೇಂದ್ರ ಸಚಿವರು ವಿಫಲರಾಗಿದ್ದಾರೆ ಎಂದು ಟೀಕಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ.


ಇದು ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ನಮಗೆ ಮೊದಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , ನಂತರ ಯಡಿಯೂರಪ್ಪ, ಅನಂತರವೇ ಮೋದಿ ಗೊತ್ತಾಗಿದ್ದು, ನಂಬಿ ಮತಗಳನ್ನು ಹಾಕಿದ ಜನರು ಮನಸ್ಸಿನಲ್ಲಿ ಇರಬೇಕು. ಆ ಕೆಲಸವನ್ನ ನಮ್ಮ ಶಾಸಕ ಯತ್ನಾಳ್ ಯಾವತ್ತೂ ಮರೆತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಯತ್ನಾಳ್ ರನ್ನ ಮಾತೃಪಕ್ಷಕ್ಕೆ ಕರೆತರಲು ಜಿಲ್ಲೆಯಲ್ಲಿ ಪಾದಯಾತ್ರೆ ಮಾಡಿದ್ದ ಅಭಿಮಾನಿಗಳು ಈಗ ಪಕ್ಷದಿಂದ ಹೊರಬರುವಂತೆ ಕರೆ ನೀಡಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರದ ರೂ. 1200 ಕೋಟಿ ನೆರೆ ಪರಿಹಾರದ ಕುರಿತು ಸದಾನಂದಗೌಡರು ಹೇಳಿದ್ದೇನು?