ಕೇಂದ್ರ ಸಚಿವರು, ಮುಖಂಡರು, ರಾಜ್ಯ ಸಂಸದರು ಹಾಗೂ ಸಚಿವರ ವಿರುದ್ಧ ಪ್ರವಾಹ ಪರಿಹಾರ ವಿಷಯದಲ್ಲಿ ಭಾರೀ ಟೀಕೆ ಮಾಡಿ ಹಿಗ್ಗಾ ಮುಗ್ಗಾ ಝಾಡಿಸಿದ್ದ ಶಾಸಕರಿಗೆ ಬಿಜೆಪಿ ಖಡಕ್ ನೋಟಿಸ್ ಜಾರಿ ಮಾಡಿದೆ. 
									
										
								
																	ವಿಜಯಪುರದ ಬಿಜೆಪಿ ಶಾಸಕ ಹಾಗೂ ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್  ನೀಡಿದ್ದ ಹೇಳಿಕೆಯಿಂದ ಕಮಲ ಪಾಳೆಯದ ಸಂಸದರು, ಮುಖಂಡರು ತೀವ್ರ ಮುಜುಗರಕ್ಕೆ ಒಳಗಾಗಿದ್ದರು. 
									
			
			 
 			
 
 			
					
			        							
								
																	ಯತ್ನಾಳ್ ನೀಡಿದ್ದ ಹೇಳಿಕೆ ವಿರುದ್ಧ ಇದೀಗ ಪಕ್ಷದ ಕೇಂದ್ರ ಶಿಸ್ತು ಸಮಿತಿಯು ಪಕ್ಷದ ನಿಯಮ ದಾಟಿ ನೀಡಿರುವ ಹೇಳಿಕೆ ಕುರಿತು ಸ್ಪಷ್ಟನೆ ಕೇಳಿದೆ. 
									
										
								
																	ಇಷ್ಟೇ ಅಲ್ಲ, ನೋಟಿಸ್ ಗೆ ಉತ್ತರ ನೀಡದಿದ್ದರೆ ತಕ್ಕ ಕ್ರಮ ಕೈಗೊಳ್ಳಬೇಕಾಗುತ್ತದೆ ಅಂತೆಲ್ಲ ಎಚ್ಚರಿಕೆ ನೀಡಲಾಗಿದೆ.