Select Your Language

Notifications

webdunia
webdunia
webdunia
webdunia

ಬಾರಾಮುಲ್ಲ ಎನ್‌ಕೌಂಟರ್; 4 ಉಗ್ರರ ಹತ್ಯೆ

Baramulla Encounter; 4 Assassination of militants
bangalore , ಶನಿವಾರ, 23 ಏಪ್ರಿಲ್ 2022 (18:28 IST)
ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾದ ಮಾಲ್ವ ಪ್ರದೇಶದಲ್ಲಿ ನಡೆಯುತ್ತಿರುವ ಎನ್‌ಕೌಂಟರ್ 2ನೇ ದಿನಕ್ಕೆ ಕಾಲಿಟ್ಟಿದೆ.
ಬುದ್‌ಗಾಂವ್ ಪೊಲೀಸರು ಮತ್ತು ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಉಗ್ರರ ಜೊತೆ ಗುಂಡಿನ ಕಾಳಗ ನಡೆಸುತ್ತಿವೆ.
ಇದುವರೆಗೂ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹೇಳಿದ್ದಾರೆ. ಇವರಲ್ಲಿ ಎಲ್‌ಇಟಿ ಉಗ್ರ ಸಂಘಟನೆ ಕಮಾಂಡರ್ ಯೂಸೂಫ್ ಕಾಂಥ್ರೋ ಸಹ ಸೇರಿದ್ದಾನೆ. ಗುರುವಾರ ಬೆಳಗ್ಗೆ ಆರಂಭವಾದ ಎನ್‌ಕೌಂಟರ್ ಇನ್ನೂ ಮುಂದುವರೆದಿದೆ. ಕಟ್ಟಡವೊಂದರಲ್ಲಿ ಇನ್ನೂ ಮೂವರು ಉಗ್ರರು ಅಡಗಿ ಕುಳಿತಿದ್ದಾರೆ. ಯೋಧರು, ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಬುದ್‌ಗಾಂವ್ ಪೊಲೀಸರು ನೀಡಿದ ನಿಖರ ಮಾಹಿತಿ ಅನ್ವಯ ಗುರುವಾರ ಉಗ್ರರಿಗಾಗಿ ತಪಾಸಣೆ ಆರಂಭಿಸಿದಾಗ ಗುಂಡಿನ ದಾಳಿ ಆರಂಭವಾಯಿತು. ಗುಂಡಿನ ಕಾಳಗದಲ್ಲಿ ಇದುವರೆಗೂ ನಾಲ್ವರು ಯೋಧರು, ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮೇ 3ರಿಂದ ಚಾರ್‌ಧಾಮ್‌ ಯಾತ್ರೆ