ಮಂಗಳೂರು: ಮುಲ್ಕಿಯ ಬಪ್ಪನಾಡು ಕ್ಷೇತ್ರದಲ್ಲಿ ಇತ್ತೀಚೆಗೆ ತೇರು ಬಿದ್ದ ಘಟನೆ ಬಗ್ಗೆ ದೈವಗಳು ಆಕ್ರೋಶ ವ್ಯಕ್ತಪಡಿಸಿದ್ದು ಅಪಾಯದ ಎಚ್ಚರಿಕೆ ನೀಡಿವೆ.
ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ರಥೋತ್ಸವದ ವೇಳೆ ರಥದ ಮೇಲ್ಭಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿತ್ತು. ಆದರೆ ಅದೃಷ್ಟವಶಾತ್ ಯಾರಿಗೂ ಅಪಾಯವಾಗಿರಲಿಲ್ಲ. ಆದರೆ ಈ ಘಟನೆ ಅಶುಭ ಸೂಚಕ ಎಂದೇ ಎಲ್ಲರೂ ಅಂದುಕೊಂಡಿದ್ದರು.
ಇದೀಗ ಘಟನೆಗೆ ಸಂಬಂಧಿಸಿದಂತೆ ಜಾರಂದಾಯ ಮತ್ತು ಬಂಟ ದೈವಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ, ಇದು ಅಪಾಯದ ಮುನ್ಸೂಚನೆ ಎಂದಿವೆ. ಇದಕ್ಕೆ ಸೂಕ್ತ ಪರಿಹಾರವನ್ನೂ ಹೇಳಿವೆ. ಒಂದು ಜೀವಕ್ಕೂ ಅಪಾಯವಾಗಲು ಬಿಟ್ಟಿಲ್ಲ ನಾನು. ಮುಂದಕ್ಕೆ ಎಲ್ಲಾ ನೋಡಿಕೊಳ್ತೇನೆ. ನನಗಿರುವ ಅಧಿಕಾರ ಬೇರೆ ಯಾವ ದೈವಗಳಿಗೂ ಇಲ್ಲ. ಪ್ರಶ್ನಾಚಿಂತನೆ ಹಾಕಬೇಕು. ಆ ಸಂದರ್ಭದಲ್ಲಿ ನಿಮ್ಮ ನಾಲಗೆಯ ಮೂಲಕ ನಾನು ಮಾತನಾಡುತ್ತೇನೆ ಎಂದು ದೈವ ಹೇಳಿದೆ.
ದುರ್ಗಾಪರಮೇಶ್ವರಿ ಅಮ್ಮ ದುಃಖದಲ್ಲಿದ್ದಾಳೆ. ಹೋಗಿ ಅವರ ಪಾದ ಹಿಡಿಯುತ್ತೇನೆ. ಕಣ್ಣೀರು ಒರೆಸಿ ಕೂರಿಸಿದ್ದಾನೆ. ಮುಂದಿನ ಭವಿಷ್ಯ ಒಳ್ಳೆಯದು ಮಾಡುತ್ತೇನೆ. ಯಾರಿಗೂ ಯಾವುದೇ ತೊಂದರೆ ಮಾಡಲ್ಲ ಎಂದು ಅವರಿಗೆ ಭಾಷೆ ನೀಡುತ್ತೇನೆ ಎಂದು ದೈವ ನುಡಿದಿದೆ. ಆಡಳಿತ ಮಂಡಳಿಯಿಂದ ತಪ್ಪಾಗಿದೆ ಎಂದು ದೈವ ಹೇಳಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.