ಬೆಂಗಳೂರಿನಲ್ಲಿ ಇಂದು ಸಂಜೆ ಮಳೆ ಬರುತ್ತಾ, ಇಲ್ಲಿದೆ ಹವಾಮಾನ ವರದಿ

Krishnaveni K
ಮಂಗಳವಾರ, 22 ಅಕ್ಟೋಬರ್ 2024 (09:34 IST)
ಬೆಂಗಳೂರು: ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿದೆ. ಇಂದು ಬೆಂಗಳೂರಿನ ಹವಾಮಾನ ಹೇಗಿದೆ, ಕರ್ನಾಟಕದಾದ್ಯಂತ ಮಳೆ ಸಾಧ್ಯತೆ ಬಗ್ಗೆ ಇಲ್ಲಿದೆ ಹವಾಮಾನ ವರದಿ.

ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ರಾತ್ರಿ ಭಾರೀ ಮಳೆಯಾಗುತ್ತಿದೆ. ನಿನ್ನೆ ರಾತ್ರಿಯೂ ಗುಡುಗು ಸಹಿತ ಮಳೆಯಾಗಿತ್ತು. ಆದರೆ ಬೆಳಗಿನ ಜಾವ ಮಳೆ ಬಿಡುವು ನೀಡಿದ್ದು, ಬೆಳಿಗ್ಗೆ ಬಿಸಿಲಿನ ವಾತಾವರಣವಿದೆ. ಹಾಗಂತ  ಇಂದು ಮಳೆ ಬರುವ ಸಾಧ್ಯತೆಯಿಲ್ಲ ಎಂದು ಸಮಾಧಾನಪಡಬೇಕಾಗಿಲ್ಲ.

ಇಂದೂ ಕೂಡಾ ಸಂಜೆವರೆಗೆ ಬಿಸಿಲು, ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಆದರೆ ಸಂಜೆ ವೇಳೆ ಮತ್ತೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳುತ್ತಿದೆ. ಈ ಬಿಸಿಲು-ಮಳೆಯ ವಾತಾವರಣ ಮುಂದಿನ ಮೂರು ದಿನಗಳವರೆಗೆ ಮುಂದುವರಿಯಲಿದೆ.

ನಿನ್ನೆ ರಾತ್ರಿ ಸುರಿದ ಮಳೆಗೂ ಸಾಕಷ್ಟು ಹಾನಿಯಾಗಿದೆ.  ರಾಜಕಾಲುವೆಯಲ್ಲಿ ಎರಡು ಕಾರು ಕೊಚ್ಚಿ ಹೋದ ಘಟನೆ ನಡೆದಿದೆ. ರಸ್ತೆಗಳಲ್ಲಿ ಇನ್ನೂ ಅಲ್ಲಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸವಾರರ ಪರದಾಟ ಮುಂದುವರಿದಿದೆ. ಕರ್ನಾಟಕದಾದ್ಯಂತ ಅಲ್ಲಲ್ಲಿ ಮಳೆಯಾಗುವ ಸಂಭವವಿದ್ದು, ಭಾಗಶಃ ಮೋಡಕವಿದ ವಾತಾವರಣ ಮುಂದುವರಿಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬನ್ನೇರುಘಟ್ಟದಲ್ಲಿ ಪ್ರವಾಸೀ ಮಹಿಳೆಯ ಮೇಲೆ ಚೀತಾ ದಾಳಿ: ಭಯಾನಕ ವಿಡಿಯೋ ಇಲ್ಲಿದೆ

Bihar election result 2025: ಲಾಲೂ ಪ್ರಸಾದ್ ಯಾದವ್ ಇಬ್ಬರು ಪುತ್ರರ ಕತೆ ಏನಾಗಿದೆ ನೋಡಿ

ಅಯ್ಯೋ ಪಾಪ ಎಂದು ಟರ್ಕಿಗೆ ಸಹಾಯ ಮಾಡಿತ್ತು ಭಾರತ: ಆದರೆ ಈಗ ಟರ್ಕಿ ಮಾಡುತ್ತಿರೋದು ಏನು

Karnataka Weather: ಈ ಜಿಲ್ಲೆಗೆ ಮಾತ್ರ ಇಂದು ಮಳೆಯ ಸೂಚನೆ

Bihar election result 2025: ಬಿಹಾರದಲ್ಲಿ ಯಾರಿಗೆ ಆರಂಭಿಕ ಮುನ್ನಡೆ

ಮುಂದಿನ ಸುದ್ದಿ
Show comments