ಬೆಂಗಳೂರಿನ ಮಗುವಿಗೆ ವೈರಸ್ ಬಂದಿರುವ ವರದಿಗಳೆಲ್ಲಾ ಸುಳ್ಳಾ: ಮಗುವಿನ ತಂದೆ ಹೇಳಿದ್ದೇನು

Krishnaveni K
ಸೋಮವಾರ, 6 ಜನವರಿ 2025 (13:12 IST)
ಬೆಂಗಳೂರು: ಚೀನಾದ ಅಪಾಯಕಾರಿ ಎಚ್ ಎಂಪಿವಿ ವೈರಸ್ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಕಂಡುಬಂದಿದೆ ಎನ್ನುವುದೆಲ್ಲಾ ಸುಳ್ಳು ವರದಿಗಳೇ? ಮಗುವಿನ ತಂದೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದೇನು ನೋಡಿ.

ಬೆಂಗಳೂರಿನ 8 ತಿಂಗಳ ಮಗುವಿಗೆ ಎಚ್ ಎಂಪಿವಿ ವೈರಸ್ ಖಚಿತವಾಗಿದೆ ಎಂಬ ಸುದ್ದಿ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಚೀನಾದಲ್ಲಿ ಅಪಾಯಕಾರಿಯಾಗಿರುವ ವೈರಸ್ ಭಾರತಕ್ಕೂ ಅದರಲ್ಲೂ ನಮ್ಮ ಬೆಂಗಳೂರಿಗೆ ಕಾಲಿಟ್ಟಿದೆ ಎಂಬುದು ಜನರಲ್ಲಿ ಆತಂಕ ಮೂಡಿಸಿತ್ತು.

ಆದರೆ ಈ ಬಗ್ಗೆ ಮಗುವಿನ ತಂದೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದೇ ಬೇರೆ. ‘ನನ್ನ ಮಗನಿಗೆ ವೈರಸ್ ತಗುಲಿದೆ ಎಂದು ಹೇಳುವ ಮೊದಲು ನೀವು ಸರಿಯಾಗಿ ವಿಚಾರ ತಿಳಿದುಕೊಳ್ಳಬೇಕು. ನನ್ನ ಮಗ ಬೆಡ್ ಮೇಲಿಂದ ಬಿದ್ದಿದ್ದ. ಅದಾದ ಬಳಿಕ ಅವನಿಗೆ 100-102 ಡಿಗ್ರಿ ಜ್ವರ ಹೋಗುತ್ತಿತ್ತು. ಹಾಲೂ ಕುಡಿಯುತ್ತಿರಲಿಲ್ಲ.

ಹೀಗಾಗಿ ನಾವು ಮೆದುಳಿನಲ್ಲಿ ಏನಾದರೂ ರಕ್ತ ಹೆಪ್ಪುಗಟ್ಟಿದೆಯೇ ಎಂದು ತಿಳಿಯಲು ಆಸ್ಪತ್ರೆಗೆ ದಾಖಲಿಸಿದ್ದೆವು. ಇಲ್ಲಿ ವೈದ್ಯರು ರಕ್ತ ಪರೀಕ್ಷೆ ಮಾಡಿ ಎಚ್ ಎಂಪಿವಿ ವೈರಸ್ ಎನ್ನುತ್ತಿದ್ದಾರೆ. ಆದರೆ ಇದು ನಿಜವಾಗಿಯೂ ಅದೇ ವೈರಸ್ ಎನ್ನುವುದು ಖಚಿತವಾಗಿಲ್ಲ. ನಾವು ಇನ್ನೊಂದು ಕಡೆ ವರದಿ ಕಳುಹಿಸಿ ಚೆಕ್ ಮಾಡುತ್ತಿದ್ದೇವೆ. ಅದಾದ ಬಳಿಕವಷ್ಟೇ ಗೊತ್ತಾಗಬೇಕು. ನನ್ನ ಮಗನ ಆರೋಗ್ಯ ಈಗ ಸುಧಾರಿಸುತ್ತಿದೆ’ ಎಂದು ಮಗುವಿನ ತಂದೆ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲೇ ಆರ್ ಎಸ್ಎಸ್ ಪಥಸಂಚಲನಕ್ಕೆ ಗ್ರೀನ್ ಸಿಗ್ನಲ್

ದಂತ ಕಳೆದುಕೊಂಡು ನೋವಿನಲ್ಲಿ ನರಳಾಡಿದ ಭೀಮನ ಸ್ಥಿತಿ ಈಗ ಹೇಗಿದೆ ಗೊತ್ತಾ

ಸಹಾಯ ಕೇಳಲು ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ, ಬಿಎಸ್‌ವೈಗೆ ಬಿಗ್‌ ಶಾಕ್‌

ಕಾಂಗ್ರೆಸ್ಸಿನವರಿಗೆ ಜನ ಸತ್ತಿದ್ದಕ್ಕೆ ಸಂಕಟವಿಲ್ಲ: ಸಿಟಿ ರವಿ

ಎಲ್ಲ ಜಮ್ಮು ಕಾಶ್ಮೀರಿ ಪ್ರಜೆಗಳು ಭಯೋತ್ಪಾದಕರಲ್ಲ: ಸಿಎಂ ಓಮರ್ ಅಬ್ದುಲ್ಲಾ

ಮುಂದಿನ ಸುದ್ದಿ
Show comments