Publish Date: Sat, 06 May 2023 (20:00 IST)
Updated Date: Sat, 06 May 2023 (20:34 IST)
ಚಾಲುಕ್ಯರ ನಾಡು ಬಾಗಲಕೋಟೆಯ ಬಾದಾಮಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ, ಬನಶಂಕರಿ ದೇವಿ ಮೂರ್ತಿಯನ್ನು ಗಿಫ್ಟ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಾದಾಮಿಯ ಬನಶಂಕರಿ ದೇಗುಲದಿಂದ ಬನಶಂಕರಿ ದೇವಿ ಮೂರ್ತಿಯನ್ನು ಸ್ಮರಣಿಕೆಯಾಗಿ ಕೊಡುಗೆ ನೀಡಲಾಗುತ್ತದೆ.. ಬನಶಂಕರಿ ದೇಗುಲ ಟ್ರಸ್ಟ್ನಿಂದ ಪ್ರಧಾನಿ ಮೋದಿಗೆ ಬನಶಂಕರಿ ದೇವಿ ಮೂರ್ತಿ ತಯಾರಿಸಲಾಗಿದೆ. 2 ಕೆ.ಜಿ ತೂಕದ ಬೆಳ್ಳಿ ಮತ್ತು ಬಂಗಾರ ಲೇಪಿತ ಹಾರವನ್ನ ಈ ಮೂರ್ತಿ ಹೊಂದಿದೆ. ಸಿಂಹರೂಪಿಣಿಯಾಗಿರೋ ವಿಶೇಷ ಬನಶಂಕರಿ ದೇವಿ ಮೂರ್ತಿಯನ್ನು ಇಂದು ಪ್ರಧಾನಿ ಮೋದಿಗೆ ಹಸ್ತಾಂತರಿಸಲಾಗುತ್ತದೆ.