Publish Date: Sat, 06 May 2023 (18:50 IST)
Updated Date: Sat, 06 May 2023 (18:44 IST)
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಮಾಲ್ ಮಾಡಿದ್ದಾರೆ.. ಕೊಪ್ಪದ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಪರ ಮತಬೇಟೆ ನಡೆಸಿದ್ದಾರೆ.. ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನನ್ನ ಹೃದಯದಿಂದ ನಿಮಗೆ ಮನವಿ ಮಾಡುತ್ತಿದ್ದೇನೆ.. ನಾನು ಶ್ರೀರಾಮನ ಜನ್ಮಭೂಮಿ ಉತ್ತರ ಪ್ರದೇಶದಿಂದ ಇಲ್ಲಿಗೆ ಬಂದಿದ್ದೇನೆ.. ಸಾವಿರಾರು ವರ್ಷಗಳಿಂದ ಕರ್ನಾಟಕ ಹಾಗೂ ಉತ್ತರ ಪ್ರದೇಶಕ್ಕೆ ಅವಿನಾಭಾವ ಸಂಬಂಧವಿದೆ.. ಒಂದೇ ಭಾರತ ಶ್ರೇಷ್ಠ ಭಾರತ ನಮ್ಮ ಕಲ್ಪನೆ ಎಂದು ತಿಳಿಸಿದ್ರು.. ಕಾಂಗ್ರೆಸ್ನವರಿಗೆ ಶ್ರೇಷ್ಠ ಭಾರತ ಇಷ್ಟ ಇಲ್ಲ.. PFI ಅನ್ನು ಬ್ಯಾನ್ ಮಾಡಿದ್ದೇವೆ.. ಹನುಮಾನ್ ಪೂಜಿಸುವ ಬಜರಂಗದಳ ಬ್ಯಾನ್ ಮಾಡುವ ಮಾತು ಕಾಂಗ್ರೆಸ್ ಆಡುತ್ತಿದೆ.. ಆದರೆ ಈ ಮಾತುಗಳನ್ನು ಹಿಂದು ಸಮಾಜ ಸ್ವೀಕಾರ ಮಾಡುವುದಿಲ್ಲ.. ಯಾರಿಂದಲೂ ಬಜರಂಗದಳವನ್ನ ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಇನ್ನು ಬಜರಂಗಬಲಿ ಮಹಾಪುರುಷ, ಎಲ್ಲರೂ ನನ್ನ ಜೊತೆ ಜೈಕಾರ ಹಾಕಿ ಹರ-ಹರ ಮಹದೇವ್, ಜೈ ಭಜರಂಗಬಲಿ ಎಂದು ಮತದಾರರ ಬಳಿ ಘೋಷವಾಕ್ಯ ಹಾಕಿಸಿದ್ದಾರೆ.