ವಿಧಾನಸಭಾ ಚುನಾವಣೆ ರಂಗೇರುತ್ತಿದ್ದು, ಮತದಾನಕ್ಕೆ ಕೇವಲ ನಾಲ್ಕು ದಿನ ಮಾತ್ರ ಬಾಕಿ ಇವೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈಗಾಗಲೇ ತಮ್ಮ ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮತದಾರರಿಗೆ ಹಲವು ಭರವಸೆಗಳನ್ನು ನೀಡಿವೆ. ಇದರ ನಡುವೆ ಈಗ ಜೆಡಿಎಸ್ ಒಂದು ಹೆಜ್ಜೆ ಮುಂದಿಟ್ಟು ಬೆಂಗಳೂರಿಗೆ ಪ್ರತ್ಯೇಕ ಜನತಾ ಪ್ರಣಾಳಿಕೆ ಪುಸ್ತಕ ಬಿಡುಗಡೆ ಮಾಡಿದೆ. ಪದ್ಮನಾಭನಗರ ನಿವಾಸದಲ್ಲಿ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೆಗೌಡ ಜನತಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.. ಪಡಿತರ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ, ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಭರವಸೆ ನೀಡಲಾಗಿದೆ, ಸ್ವಚ್ಛ ಬೆಂಗಳೂರು ಅಡಿಯಲ್ಲಿ ಜನಸಂದಣಿ ಪ್ರದೇಶಗಳಲ್ಲಿ 100 ಶೌಚಾಲಯ ನಿರ್ಮಾಣದ ಭರವಸೆ ನೀಡಲಾಗಿದೆ.. ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯಧನ, ಆಟೋ ಚಾಲಕರಿಗೆ ಸೆಕ್ಯೂರಿಟಿ ಗಾರ್ಡ್ಗಳಿಗೆ 2 ಸಾವಿರ ರೂ ಸಹಾಯಧನ. ಬೀದಿ ಬದಿ ವ್ಯಾಪಾರಿಗಳಿಗೆ ದುಡಿಮೆ ರೂಪದಲ್ಲಿ ವೇತನ ಪಾವತಿ ಭರವಸೆ ನೀಡಲಾಗಿದೆ.. ಇನ್ನು ಸಾಮಾಜಿಕ ಭದ್ರತೆಗಳು ಮತ್ತು ಆರೋಗ್ಯ ಶ್ರೀರಕ್ಷೆಗೆ ಮಹತ್ವ ಕೊಡಲಾಗಿದೆ.. ಮಹಾನಗರ ಪಾಲಿಕೆ ಆಡಳಿತ ಸುಧಾರಣೆ, ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು, ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ಘೋಷಣೆ ಮಾಡಲಾಗಿದೆ.. ಇನ್ನು ಬಡವರಿಗೆ ಮತ್ತು ಕೈಗಾರಿಕಾ ಕಾರ್ಮಿಕರಿಗೆ ಕೈಗೆಟಕುವ ದರದಲ್ಲಿ ವಸತಿ ಸೌಲಭ್ಯದ ಭರವಸೆ ನೀಡಲಾಗಿದೆ