Select Your Language

Notifications

webdunia
webdunia
webdunia
webdunia

ಖರ್ಗೆಯನ್ನ ಜಿರಳೆಗೆ ಹೋಲಿಸಿದ ಈಶ್ವರಪ್ಪ

ಖರ್ಗೆಯನ್ನ ಜಿರಳೆಗೆ ಹೋಲಿಸಿದ ಈಶ್ವರಪ್ಪ
ಚಿತ್ತಾಪುರ , ಶನಿವಾರ, 6 ಮೇ 2023 (19:30 IST)
ಚಿತ್ತಾಪುರದ ಕಾಂಗ್ರೆಸ್​​ ಅಭ್ಯರ್ಥಿ ಪ್ರಿಯಾಂಕಾ ಖರ್ಗೆಯನ್ನು ಮಾಜಿ ಸಚಿವ ಈಶ್ವರಪ್ಪ ಜಿರಲೆಗೆ ಹೋಲಿಸಿದ್ದಾರೆ.ಬೀದರ್​​​ನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಗೆ ಶಾಸಕ ಪ್ರಿಯಾಂಕಾ ಖರ್ಗೆ ನಾಲಾಯಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ... ಇವನು ನಮ್ಮ ಪ್ರಧಾನಿಗಳನ್ನು ನಾಲಾಯಕ್ ಎನ್ನುತ್ತಾನೆ ಎಂದು ಏಕವಚನದಲ್ಲಿ ಪ್ರಿಯಾಂಕ್​​ ಖರ್ಗೆಗೆ ಈಶ್ವರಪ್ಪ ಬೈದಿದ್ದಾರೆ.. ಇವನು ಎಷ್ಟರಮಟ್ಟಿಗೆ ಅಯೋಗ್ಯ ಇರಬೇಕು‌.ಮೋದಿ ಎಲ್ಲಿ, ಪ್ರಿಯಾಂಕ್ ಖರ್ಗೆ ಎಲ್ಲಿ.. ರಾಜ್ಯದ ಜನ್ರ ಕ್ಷಮೆ ಕೇಳದೇ ಇದ್ರೆ ಈ ಚುನಾವಣೆಯಲ್ಲಿ ಜನ್ರು ಪ್ರಿಯಾಂಕ ಖರ್ಗೆ ಠೇವಣಿ ಕಳೆಸಿ ಮನೆಗೆ ಕಳುಹಿಸುತ್ತಾರೆ ಅಂತಾ ಕಿಡಿಕಾರಿದ್ದಾರೆ.. ಬಜರಂಗದಳ ಬ್ಯಾನ್ ಮಾಡುತ್ತೇವೆ ಎನ್ನುತ್ತಾರೆ... ಬಜರಂಗದಳವನ್ನು PFIಗೆ ಹೋಲಿಕೆ ಮಾಡುತ್ತಾರೆ... PFI ರಾಷ್ಟದ್ರೋಹ ಸಂಸ್ಥೆ ಎಂದು ಬ್ಯಾನ್ ಮಾಡಿದ್ದೇವೆ... ಸತ್ತೋಗಿರೋ ಹೆಣಕ್ಕೆ ಮೊತ್ತೊಂದು ಬಾರಿ ಗುಂಡು ಹೋಡಿತಾರೆ... ಬ್ಯಾನ್​​ ಆಗಿರೋ ಸಂಸ್ಥೆಯನ್ನು ಯಾರಾದ್ರು ಬ್ಯಾನ್ ಮಾಡುತ್ತೇವೆ ಎಂದು ಹೇಳುತ್ತಾರಾ ಎಂದು ಲೇವಡಿ ಮಾಡಿದ್ರು. ವರುಣಾದಲ್ಲಿ ನಾವು ಸಿದ್ದರಾಮಯ್ಯನ ಸೋಲಿಸಲ್ಲ. ಅವರ ಸೋಲನ್ನು ಅವರೇ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹನೂರಿನಲ್ಲಿ HDK ಅಬ್ಬರದ ರೋಡ್​ ಶೋ