Publish Date: Sat, 06 May 2023 (19:00 IST)
Updated Date: Sat, 06 May 2023 (18:55 IST)
ಇಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರಕ್ಕೆ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ರಮ್ಯಾ ಆಗಮಿಸಿ ಪ್ರಚಾರ ನಡೆಸಿದ್ರು. ಕಾಂಗ್ರೆಸ್ ಅಭ್ಯರ್ಥಿಗಳ ಪರ ರಮ್ಯಾ ಪ್ರಚಾರ ಮಾಡಿದ್ರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರದಲ್ಲಿ ರಮ್ಯಾ ಪಾಲ್ಗೊಂಡ್ರು. ರಮ್ಯಾಗೆ M.B. ಪಾಟೀಲ್ ಅವರ ಪತ್ನಿ ಆಶಾ ಪಾಟೀಲ್ ಸಾಥ್ ನೀಡಿದ್ರು. ಮಧ್ಯಾಹ್ನ 3ಕ್ಕೆ ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, 3.30ಕ್ಕೆ ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ.. 4.30ಕ್ಕೆ ಹೊಸೂರು ಫ್ಯಾಕ್ಟರಿಯಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ.