Select Your Language

Notifications

webdunia
webdunia
webdunia
webdunia

ರೌಡಿಗಳೇ ಹುಷಾರ್ : ಬರ್ತಿದೆ ಆ್ಯಂಟಿ ಗೂಂಡಾ ಸ್ಕ್ಯಾಡ್

ರೌಡಿಗಳೇ ಹುಷಾರ್ : ಬರ್ತಿದೆ ಆ್ಯಂಟಿ ಗೂಂಡಾ ಸ್ಕ್ಯಾಡ್
ಹುಬ್ಬಳ್ಳಿ , ಭಾನುವಾರ, 29 ಸೆಪ್ಟಂಬರ್ 2019 (18:26 IST)
ಹುಬ್ಬಳ್ಳಿ - ಧಾರವಾಡದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಆ್ಯಂಟಿ ಗೂಂಡಾ ಸ್ಕ್ಯಾಡ್ ರಚನೆ ಮಾಡಲಾಗುತ್ತಿದೆ.

ಹೀಗಂತ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹು-ಧಾ ಕಮಿಷ್ನರೇಟ್ ಹಾಗೂ ಧಾರವಾಡ ಜಿಲ್ಲಾ ಪೊಲೀಸ ಅಧಿಕಾರಿಗಳ ಜೊತೆಯ ಸಭೆಯ ಬಳಿಕ ಮಾತನಾಡಿದ ಅವರು, ನಗರದಲ್ಲಿ ಶೂಟೌಟ್, ಚಾಕು ಇರಿತ ಪ್ರಕರಣಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ‌.

ಈ ಹಿನ್ನೆಲೆಯಲ್ಲಿ ಆ್ಯಂಟಿ ಗೂಂಡಾ ಸ್ಕ್ಯಾಡ್ ರಚನೆ ಮಾಡಲಾಗುತ್ತಿದ್ದು, ಇದರ ಮೂಲಕ ಪ್ರತಿವಾರ ಎಡಿಜಿಪಿಗೆ ವರದಿ ಸಲ್ಲಿಸಲು ಪೊಲೀಸ ಆಯುಕ್ತರಿಗೆ ಸಭೆಯಲ್ಲಿ ಸೂಚನೆ ನೀಡಲಾಗಿದೆ. 

ಅಲ್ಲದೇ, ರಾಜ್ಯದ ಸೂಕ್ಷ್ಮ ಠಾಣೆಗಳನ್ನು ಗುರ್ತಿಸಿ ಎಡಿಜಿಪಿ ಕಚೇರಿಯಿಂದಲೇ ನಿಯಂತ್ರಣ ಮಾಡಲಾಗುವುದು. ಅಪರಾಧಗಳೊಂದಿಗೆ ಪೊಲೀಸರ ಒಡನಾಟ ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

ಹಲವಾರು ವರ್ಷಗಳಿಂದ ಒಂದೆಡೆ ಠಿಕಾಣಿ ಹೂಡಿರುವ ಪೊಲೀಸರ ವರ್ಗಾವಣೆ ಮಾಡಲಾಗುವುದು ಎಂದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ದಸರಾ ಆಚರಣೆ ಈ ಮಠದಲ್ಲಿ ಆಗಿದ್ಹೇಗೆ?