Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನವರು ನನಗೆ ಮಸಿ ಬಳಿಯೋ ಕೆಲಸ ಮಾಡ್ತಿದ್ದಾರೆ ಎಂದು ಅಶ್ವಥ್ ನಾರಾಯಣ ಆರೋಪ

webdunia
bangalore , ಗುರುವಾರ, 17 ನವೆಂಬರ್ 2022 (17:13 IST)
ಹೊಂಬಾಳೆ ಸಂಸ್ಥೆಯ ನನ್ನ ಸಹೋದರ ಸಂಸ್ಥೆಗೂ ಇದಕ್ಕೂ ಸಂಬಂಧವಿಲ್ಲ. ನಮ್ಮ ನಾಡಿಗೆ ಗೌರವ ತರುವ ಸಂಸ್ಥೆ ನಮ್ಮದು.ಕಾಂಗ್ರೆಸ್ ಅವರಂತೆ ನಾಡಿಗೆ ಅಗೌರವ ತರುವವರು’ ಅಲ್ಲ.ಕಾಂಗ್ರೆಸ್ ಅವರಿಗೆ ಒಂದು ಎರಡು ಇಲ್ಲ.ಫೋಟೋ ರಿಲೀಸ್ ವಿಚಾರ ಸಂಬಂಧ ಕೃಷ್ಣಪ್ಪ ಯಾರು ಅಂತ ಗೊತ್ತು.ಸಾಮಾಜಿಕ ಕಾರ್ಯಕ್ರಮದಲ್ಲಿ ಕರೆದಾಗ ಹೋಗಿದ್ದೆ.ಕಾಂಗ್ರೆಸ್ ಅವರನ್ನ ಕೇಳಿ ಹೋಗಬೇಕಾ?ಕಾರ್ಯಕ್ರಮಕ್ಕೆ ಕರೆದಿದ್ದರು. ಹೋಗಿದ್ದೆ. ಅದು ತಪ್ಪಾ?ಕಾಂಗ್ರೆಸ್ ಅವರು ದೂರು ನೀಡಲಿ.ಚುನಾವಣೆ ಆಯೋಗ ತನಿಖೆ ಮಾಡುತ್ತೆ.ಚುನಾವಣೆ ಆಯೋಗದ ತನಿಖೆ ಬಗ್ಗೆ ತೀರ್ಮಾನ ಮಾಡಲಿ ಎಂದು ಅಶ್ವಥ್ ನಾರಾಯಣ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
 
ಕಾಂಗ್ರೆಸ್ ಗೆ ಮಾಹಿತಿ ಕೊರತೆ, ಆಧಾರದ ಕೊರತೆ ಇದೆ.ಕಾಂಗ್ರೆಸ್ ಅವರು ಮಸಿ ಬಳದುಕೊಂಡಿದ್ದಾರೆ.ಕಾಂಗ್ರೆಸ್ ಕಾನೂನು ಉಲ್ಲಂಘನೆ ಮಾಡಿದ್ದಾರೆ.ಡಿಕೆ, ಸಿದ್ದರಾಮಯ್ಯ, ಸುರ್ಜೇವಾಲ ವಿರುದ್ಧ ಕೆಲಸ ಮಾಡ್ತಿದ್ದಾರೆ.ಆಧಾರ ಇಡಬೇಕು.ಇದರಲ್ಲಿ ನಾನು ಕಾನೂನು ಭಾಗವಹಿಸಿಲ್ಲ.ನನಗೆ ಮಸಿ ಬಳಿಸೋಕೆ ಹೀಗೆ ಮಾಡ್ತಾರೆ.ರವಿ ಅನ್ನೋನು ನನಗೆ ಗೊತ್ತು.ನನಗೆ ಎಲ್ಲರೂ ಸಿಂಪಥೈಸರ್ ಗಳೇ.ಯಾರ್ ಆರೋಪ ಮಾಡಿದ್ದಾರೆ ಆಧಾರ ಕೇಳಿ.ಆಧಾರ ಇದ್ದರೆ ದೂರು ಕೊಡಲಿ.ಚುನಾವಣೆ ಆಯೋಗಕ್ಕೆ ಈ ಬಗ್ಗೆ ಕೇಳಿ.ಅವರು ಯಾರೋ ಏನೋ ಮಾಡಿದ್ರೆ ನನಗೇನು ಸಂಬಂಧ.ನಾನು ಎಲೆಕ್ಷನ್ ಕಮಿಷನರ್ ಅಲ್ಲ.ಕಾಂಗ್ರೆಸ್ ಅವರಿಗೆ ನನ್ನನ್ನ ನೋಡಿದ್ರೆ ಭಯ.ಟಾರ್ಗೆಟ್ ಅಶ್ವಥ್ ನಾರಾಯಣ ಆಗಿದ್ದಾರೆ.ನಮ್ಮಲ್ಲಿ ಯಾರು ಸಂಚು ಮಾಡ್ತಿಲ್ಲ ಒಗ್ಗಟ್ಟಾಗಿ ಇದ್ದೇವೆ .ಇದು ಕುಟುಂಬದ ಪಕ್ಷ ಅಲ್ಲ.ನಮ್ಮದು ಖಾಸಗಿ ಸಂಸ್ಥೆ ಅಷ್ಟೆ.ಇದು ಗಾಳಿ ಸುದ್ದಿ ಅಷ್ಟೆ.ನಾನು ಯಾರನ್ನು ಡಿಪೆಂಡ್ ಮಾಡಲ್ಲ.ಇಂತಹ ಚುನಾವಣೆ ವಿಚಾರ ಬಂದರೆ ಆಯೋಗ ನೋಡುತ್ತೆ ಅವರಿಗೆ ದೂರು ನೀಡಲಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯರಿಗೆ 3,000 ವೀಸಾ: ರಿಷಿ ಸುನಕ್