Publish Date: Sat, 11 Jun 2022 (13:00 IST)
Updated Date: Sat, 11 Jun 2022 (13:01 IST)
ಹುಬ್ಬಳ್ಳಿ : ಕುಟುಂಬ ಪಕ್ಷಗಳ ನಿಲುವಿನಿಂದ ಬೇಸತ್ತು ಕೆಲವರು ಬಿಜೆಪಿಗೆ ಬರುತ್ತಾರೆ ಕಾದು ನೋಡಿ,
ಪರಿಸ್ಥಿತಿಗೆ ಅನುಗುಣವಾಗಿ ಯಾರ್ಯಾರು ಬರುತ್ತಾರೆ ಎನ್ನುವುದು ಗೊತ್ತಾಗುತ್ತದೆ ಎಂದು ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲದ ಸುಳಿವನ್ನು ಸಚಿವ ಅಶ್ವಥ್ ನಾರಾಯಣ್ ಬಿಟ್ಟುಕೊಟ್ಟಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಬೇರೆ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಉತ್ತಮ ಭವಿಷ್ಯವಿದೆ. ಅದೇ ರೀತಿ ಅವಕಾಶಗಳಿವೆ. ಹೀಗಾಗಿ ಇನ್ನೂ ಹಲವು ಜನ ಬಿಜೆಪಿಗೆ ಸೇರಲಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಉತ್ತರಪ್ರದೇಶದಲ್ಲಿನ ಹಿಂಸಾಚಾರ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಒಂದು ಹೇಳಿಕೆಯನ್ನಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ಇದು ಸರಿಯಲ್ಲ. ದೇಶದ ಐಕ್ಯತೆ ವಿಚಾರದಲ್ಲಿ ಹಿಂಸಾಚಾರ ನಡೆಸುವುದು ಸರಿಯಲ್ಲ ಎಂದರು.