Select Your Language

Notifications

webdunia
webdunia
webdunia
webdunia

ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ!

ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ!
ಬೆಂಗಳೂರು , ಶುಕ್ರವಾರ, 14 ಜನವರಿ 2022 (15:43 IST)
ಬೆಂಗಳೂರು : ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಸಿಹಿಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.
 
ಅತಿಥಿ ಉಪನ್ಯಾಸಕರ ವೇತನವನ್ನು 11 ಸಾವಿರದಿಂದ 28 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. 13 ಸಾವಿರ ಇರೋರಿಗೆ 32 ಸಾವಿರ ನೀಡಲಾಗುತ್ತೆ. ಪೂರ್ಣ ಪ್ರಮಾಣದಲ್ಲಿ ವರ್ಕ್ಲೋಡ್ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.

 
5 ವರ್ಷ ಮೇಲ್ಪಟ್ಟು ಸೇವೆ ಮಾಡಿದ ಯುಜಿಸಿ ಕ್ವಾಲಿಫಿಕೇಶನ್ ಇರೋರಿಗೆ 32 ಸಾವಿರ ಕೊಡ್ತೀವಿ. 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸದ ಯುಜಿಸಿ ಕ್ವಾಲಿಫಿಕೇಶನ್ ಇರೋ ಅತಿಥಿ ಉಪನ್ಯಾಸಕರಿಗೆ 30 ಸಾವಿರ, 5 ವರ್ಷ ಸೇವೆ ಹೆಚ್ಚು ಸೇವೆ ಸಲ್ಲಿಸಿದ ಯುಜಿಸಿ ಕ್ವಾಲಿಫಿಕೇನ್ ಇಲ್ಲದವರಿಗೆ 28 ಸಾವಿರ,

5 ವರ್ಷ ಸೇವೆ ಇಲ್ಲದ ಯುಜಿಸಿ ಕ್ವಾಲಿಫಿಕೇಶನ್ ಇಲ್ಲದವರಿಗೆ 26 ಸಾವಿರ ಸಂಬಳ ನೀಡ್ತೀವಿ. ಪ್ರತಿ ತಿಂಗಳು 10 ರಂದು ಸಂಬಳ ಕೊಡ್ತೀವಿ ಎಂದು ಸಚಿವರು ಘೋಷಣೆ ಮಾಡಿದರು.

ಅತಿಥಿ ಉಪನ್ಯಾಸಕರನ್ನ ಖಾಯಂ ಮಾಡಲು ಸಾಧ್ಯವಿಲ್ಲ. ಕೃಪಾಂಕ ನೀಡುವ ಪ್ರಸ್ತಾಪವೂ ಇಲ್ಲ. ಸಂಬಳ ಜಾಸ್ತಿ ಮಾಡೋಕೆ ಸಮಿತಿ ವರದಿ ನೀಡಿದೆ. ಅದನ್ನ ಸರ್ಕಾರ ಒಪ್ಪಿಕೊಂಡಿದೆ. ವರ್ಷದಲ್ಲಿ 10 ತಿಂಗಳು ಅತಿಥಿ ಉಪನ್ಯಾಸಕರಿಗೆ ಕೆಲಸ ಇರುತ್ತೆ. ಫುಲ್ ವರ್ಕ್ ಲೋಡ್ ಅತಿಥಿ ಉಪನ್ಯಾಸಕರಿಗೆ ಕೊಡ್ತೀವಿ ಎಂದು ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮಕರ ಜ್ಯೋತಿ ದರುಶನ ಪುಣ್ಯಕ್ಕಾಗಿ ಕಾದಿದೆ ಶಬರಿಮಲೆ