Select Your Language

Notifications

webdunia
webdunia
webdunia
webdunia

ಮಕರ ಜ್ಯೋತಿ ದರುಶನ ಪುಣ್ಯಕ್ಕಾಗಿ ಕಾದಿದೆ ಶಬರಿಮಲೆ

ಮಕರ ಜ್ಯೋತಿ ದರುಶನ ಪುಣ್ಯಕ್ಕಾಗಿ ಕಾದಿದೆ ಶಬರಿಮಲೆ
bangalore , ಶುಕ್ರವಾರ, 14 ಜನವರಿ 2022 (14:50 IST)
ಸುಮಾರು ಎರಡು ತಿಂಗಳ ಕಠಿಣ ವೃತಾನುಷ್ಠಾನ ಮಾಡಿ ಶಬರಿಮಲೆ ಯಾತ್ರೆ ಮಾಡಿದ ಅಯ್ಯಪ್ಪ ಭಕ್ತರಿಗೆ ಇಂದು ದರುಶನ ಪುಣ್ಯ ನೀಡಿ ಪೊನ್ನಂಬಲ ಮೇಳದಲ್ಲಿ ಮಕರ ಜ್ಯೋತಿ ಬೆಳಗಲಿದೆ.ಮಕರ ಜ್ಯೋತಿ ದರುಶನಕ್ಕಾಗಿ ಶಬರಿಮಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಕೋವಿಡ್ ನಿರ್ಬಂಧದ ಕುಠೀರಗಳನ್ನು ನಿರ್ಮಿಸಲು ತಂಗಲು ಅಯ್ಯಪ್ಪ ಭಕ್ತರಿಗೆ ಅವಕಾಶ ಇಲ್ಲದಿದ್ದರೂ ಸನ್ನಿಧಾನಂ, ಪಂಪಾದಲ್ಲಿದೆ ಪೊನ್ನಂಬಲಮೇಡಿನ ಮಕರ ಕಾಣುವ ಎಲ್ಲಾ ಜ್ಯೋತಿಯೂ ಮಕರ ಜ್ಯೋತಿಯ ದರ್ಶನಕ್ಕೆ ಅಯ್ಯಪ್ಪ ಭಕ್ತರು ಕಾಯುತ್ತಿದ್ದಾರೆ. ಅಯ್ಯಪ್ಪನ ದರುಶನ ಪಡೆದು, ಮಕರ ಜ್ಯೋತಿ ದರ್ಶಿಸಿ ಭಕ್ತರು ಮಲೆ ಇಳಿಯುತ್ತಾರೆ. ಮಧ್ಯಾಹ್ನ 2.29ರ ಶುಭ ಮುಹೂರ್ತದಲ್ಲಿ ಸನ್ನಿಧಾನದಲ್ಲಿ ಮಕರ ಸಂಕ್ರಮಣ ಪೂಜೆ ನೆರವೇರಲಿದೆ. ಕವಡಿಯಾರ್ ಅರಮನೆಯಿಂದ ತಂದ ತುಪ್ಪದಲ್ಲಿ ಸಂಕ್ರಮಣದ ವೇಳೆ ಅಯ್ಯಪ್ಪನಿಗೆ ವಿಶೇಷ ಅಭಿಷೇಕ ನೆರವೇರಲಿದೆ.ಪಂದಳದಿಂದ ಬರುವ ತಿರುವಾಭರಣ ಮೆರವಣಿಗೆ ಸಂಜೆ 6.20ಕ್ಕೆ ಸನ್ನಿಧಾನಕ್ಕೆ ಪ್ರವೇಶಿಸಲಿದೆ.ತಂತ್ರಿ ಮತ್ತು ಪರಿವಾರದವರು ತಿರುವಾಭರಣಗಳನ್ನು ಸ್ವೀಕರಿಸಿ ಅಯ್ಯಪ್ಪ ವಿಗ್ರಹಕ್ಕೆ ತೊಡಿಸಿ ಅಲಂಕರಿಸಿ 6.30-6. 45ರ ದೀಪಾರಾಧನೆ ನಡೆಯುತ್ತಿದ್ದಂತೆ ಪೊನ್ನಂಬಲಮೆಟ್ಟಿಯಲ್ಲಿ ಮಕರ ಜ್ಯೋತಿ ಪ್ರತ್ಯಕ್ಷ ಸಮಾರಂಭ. ಕೋವಿಡ್ ಹಿನ್ನಲೆಯಲ್ಲಿ ಶಬರಿಮಲೆ, ಪಂಪಾ ನದಿ ತೀರದಲ್ಲಿ ಭಕ್ತರ ಸಂಖ್ಯೆಗೆ ನಿಯಂತ್ರಣ ಹೇರಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

10 ದಿನಗಳ ನಂತರವೂ ಸೋಂಕು ಹರಡಬಹುದು: ಅಧ್ಯಯನ