Select Your Language

Notifications

webdunia
webdunia
webdunia
webdunia

10 ದಿನಗಳ ನಂತರವೂ ಸೋಂಕು ಹರಡಬಹುದು: ಅಧ್ಯಯನ

10 ದಿನಗಳ ನಂತರವೂ ಸೋಂಕು ಹರಡಬಹುದು: ಅಧ್ಯಯನ
ಬ್ರಿಟನ್ , ಶುಕ್ರವಾರ, 14 ಜನವರಿ 2022 (14:01 IST)
ಬ್ರಿಟನ್ : ಕೆಲವರು ಕೊವಿಡ್ ಸೋಂಕಿಗೆ ತುತ್ತಾದ ಹತ್ತು ದಿನಗಳ ನಂತರವೂ ಇತರರಿಗೆ ಸೋಂಕು ಹರಡಬಲ್ಲರು ಎಂದು ಬ್ರಿಟನ್ನ ಎಕ್ಸೆಟರ್ ವಿವಿಯ ಸಂಶೋಧನೆ ತಿಳಿಸಿದೆ.

ಈಗಾಗಲೇ ಪಾಸಿಟಿವ್ ಬಂದಿದ್ದ ವ್ಯಕ್ತಿಗಳು ನಂತರವೂ ಸೋಂಕು ಹರಡಬಲ್ಲರೇ ಎಂಬುದನ್ನು ಸಂಶೋಧನೆ ಮಾಡಲಾಗಿತ್ತು. ಒಟ್ಟು 176 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಅದರಲ್ಲಿ ಸುಮಾರು 13 ಪ್ರತಿಶತ ಜನರು ಸೋಂಕು ಕಂಡುಬಂದ ಹತ್ತು ದಿನಗಳ ನಂತರವೂ ಮತ್ತೊಬ್ಬರಿಗೆ ಸೋಂಕು ಹರಡಲು ಕಾರಣವಾಗಬಲ್ಲರು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳು ಸದ್ಯ ಐಸೋಲೇಶನ್ ಅವಧಿಯನ್ನು ಐದು ದಿನಕ್ಕೆ ಇಳಿಸಿವೆ. ಕೊರೊನಾ ಪಾಸಿಟಿವ್ ಆದ ಸಿಬ್ಬಂದಿಗಳಿಂದ ಕೆಲಸದ ಸ್ಥಳಗಳಲ್ಲಿ ಜನರ ಅಭಾವವಾಗುತ್ತಿದೆ.

ಇದನ್ನು ತಡೆಯಲು ಈ ದೇಶಗಳು ಐಸೋಲೇಶನ್ ಕಡಿತಗೊಳಿಸುವ ಮಾರ್ಗಕ್ಕೆ ಮೊರೆ ಹೋಗಿವೆ. ಇದೀಗ ಹೊಸ ಅಧ್ಯಯನ ಅಂತಹ ನಿರ್ಧಾರಗಳಿಂದ ಮತ್ತೆ ಸೋಂಕು ಹರಡಬಹುದು ಎಂದು ಸೂಕ್ಷ್ಮವಾಗಿ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಲಾಕ್‌ಡೌನ್‌ ಇಲ್ಲ!