Select Your Language

Notifications

webdunia
webdunia
webdunia
webdunia

ಪತ್ತೆಯಾಯ್ತು ಕೊವಿಡ್ 19ನ ಮತ್ತೊಂದು ತಳಿ!

ಪತ್ತೆಯಾಯ್ತು ಕೊವಿಡ್ 19ನ ಮತ್ತೊಂದು ತಳಿ!
ನವದೆಹಲಿ , ಗುರುವಾರ, 6 ಜನವರಿ 2022 (09:19 IST)
ಸದ್ಯ ಜಗತ್ತಿನ ಅನೇಕ ದೇಶಗಳಲ್ಲಿ ಒಮಿಕ್ರಾನ್ ಸೋಂಕು ಹರಡುತ್ತಿದೆ.

ನವೆಂಬರ್ನಲ್ಲಿ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಒಮಿಕ್ರಾನ್ ಅತ್ಯಂತ ವೇಗವಾಗಿ ಹರಡುತ್ತಿದೆ. ಇದು ಮಾರಣಾಂತಿಕವಲ್ಲದೆ ಇದ್ದರೂ, ವೇಗವಾಗಿ ಹರಡುವ ವೈರಸ್.ಆದರೆ ಈ ಮಧ್ಯೆ ಫ್ರಾನ್ಸ್ನ ವಿಜ್ಞಾನಿಗಳು, ಕೊವಿಡ್ 19ನ ಇನ್ನೊಂದು ರೂಪಾಂತರಿ ತಳಿಯನ್ನು ಪತ್ತೆ ಮಾಡಿದ್ದಾರೆ. 

ಆಫ್ರಿಕನ್ ದೇಶ ಕೆಮೆರೂನ್ಗೆ ಪ್ರಯಾಣ ಮಾಡಿದ್ದವರು ಮತ್ತು ಅವರಿಗೆ ಸಂಬಂಧ ಪಟ್ಟ ಸುಮಾರು 12 ಜನರಲ್ಲಿ ಈ ಹೊಸ ತಳಿ ಕಾಣಿಸಿಕೊಂಡಿದ್ದಾಗಿ ಐಎಚ್ಯು ಮೆಡಿಟರೇನಿ ಇನ್ಫೆಕ್ಷನ್ ಇನ್ಸ್ಟಿಟ್ಯೂಟ್ನ ಸಂಶೋಧಕರು ಹೇಳಿದ್ದಾರೆ.

1.640.2 ರೂಪಾಂತರವಾದ ಇದಕ್ಕೆ ಐಎಚ್ಯು ಎಂದೇ ಹೆಸರಿಸಲಾಗಿದೆ. ಅಂದಹಾಗೆ ಈ ಎಲ್ಲ ಪ್ರಕರಣಗಳೂ ಕೂಡ ಫ್ರಾನ್ಸ್ನ ಮಾರ್ಸಿಲ್ಲೆಸ್ ಬಳಿ ಪತ್ತೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಸಿಕೆ ಪಡೆದ ಮಕ್ಕಳಿಗೆ ಪ್ಯಾರಸಿಟಮಲ್ ಮಾತ್ರೆ ನೀಡಲ್ಲ ಯಾಕೆ?