Select Your Language

Notifications

webdunia
webdunia
webdunia
webdunia

ಹೋಂ ಐಸೋಲೇಶನ್ ಮಾರ್ಗಸೂಚಿ ಇಲ್ಲಿದೆ

ಹೋಂ ಐಸೋಲೇಶನ್ ಮಾರ್ಗಸೂಚಿ ಇಲ್ಲಿದೆ
ಜೈಪುರ , ಬುಧವಾರ, 5 ಜನವರಿ 2022 (14:48 IST)
ಜೈಪುರ : ಭಾರತವು ಇಂದು ಉದಯಪುರದಲ್ಲಿ ತನ್ನ ಮೊದಲ ಒಮಿಕ್ರಾನ್ ಸಾವನ್ನು ವರದಿ ಮಾಡಿದೆ ಎಂದು ಸರ್ಕಾರಿ ಮೂಲಗಳು ದೃಢಪಡಿಸಿವೆ.

1. ಮನೆಯಲ್ಲೇ ಐಸೋಲೇಟ್ ಆಗುವ ಸೌಮ್ಯ/ಲಕ್ಷಣ ರಹಿತ ಕೊರೊನಾ ರೋಗಿಗಳಿಗೆ, ಸೋಂಕು ನಿರ್ವಹಣೆಗೆ ಮಾರ್ಗದರ್ಶನ ನೀಡಲು, ಜಿಲ್ಲೆ/ಉಪಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಿ, ಅದರ ನಂಬರ್ನ್ನು ನೀಡಲಾಗುತ್ತದೆ.

2. ಹೀಗೆ ಸೋಂಕು ರಹಿತರು ಮತ್ತು ಸೌಮ್ಯ ಲಕ್ಷಣಗಳಿರುವವರು ಮನೆಯಲ್ಲಿ ಐಸೋಲೇಟ್ ಆಗಲು, ಕ್ವಾರಂಟೈನ್ಗೆ ಒಳಪಡಲು ಅಗತ್ಯ ಸೌಲಭ್ಯಗಳನ್ನು ಹೊಂದಬೇಕು.

3. ಮನೆಯಲ್ಲಿ ಇರುವ ಸೋಂಕಿತರ ಆರೈಕೆಗೆ ನಿಲ್ಲುವವರು 2್ಠ47 ಕಾಲವೂ ಅವರ ಮೇಲೆ ನಿಗಾ ಇಡಬೇಕು. ಅಗತ್ಯಗಳನ್ನು ಪೂರೈಸಬೇಕು. ಮುಖ್ಯವಾಗಿ ಈ ಕೇರ್ಟೇಕರ್ಗಳು ಎರಡೂ ಡೋಸ್ ಕೊವಿಡ್ 19 ಲಸಿಕೆ ತೆಗೆದುಕೊಂಡವರು ಆಗಿರಬೇಕು.

4. 60 ವರ್ಷ ಮೇಲ್ಪಟ್ಟವರು, 60 ವರ್ಷ ಮೇಲ್ಪಟ್ಟು ಇತರ ರೋಗಗಳಿಂದ ಬಳಲುತ್ತಿರುವವರು ಕೊರೊನಾ ಸೋಂಕಿಗೆ ಒಳಗಾಗಿ ಅವರಿಗೆ ಸೌಮ್ಯ ಲಕ್ಷಣಗಳಿದ್ದರೆ ಅಥವಾ ಲಕ್ಷಣರಹಿತರಾಗಿದ್ದರೆ, ಅವರು ಒಮ್ಮೆಲೇ ಹೋಂ ಐಸೋಲೇಶನ್ಗೆ ಒಳಗಾಗುವಂತಿಲ್ಲ.

5. ಇಮ್ಯುನೊಕೊಪ್ರೊಮೈಸ್ಡ್ ರೋಗಿಗಳು ಅಂದರೆ ರೋಗ ನಿರೋಧಕ ಶಕ್ತಿಯ ತೀವ್ರ ಕೊರತೆಯಿಂದ ಬಳಲುತ್ತಿರುವವರನ್ನು ಯಾವ ಕಾರಣಕ್ಕೂ ಹೋಂ ಐಸೋಲೇಶನ್ಗೆ ಶಿಫಾರಸ್ಸು ಮಾಡಲಾಗುವುದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಒಮಿಕ್ರಾನ್​​ನಿಂದ ಮೊದಲ ಸಾವು!