Select Your Language

Notifications

webdunia
webdunia
webdunia
webdunia

23 ರಾಜ್ಯಗಳಿಗೆ ಹರಡಿದೆ ಒಮಿಕ್ರಾನ್ ಸೋಂಕು

Spread to 23 States
bangalore , ಮಂಗಳವಾರ, 4 ಜನವರಿ 2022 (17:58 IST)
ಭಾರತದಲ್ಲಿ ಇದುವರೆಗೆ 1700 ಕೊರೊನಾ ವೈರಸ್‌ನ ಹೊಸ ರೂಪಾಂತರ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 639 ಜನರು ಸೋಂಕು ಮುಕ್ತರಾಗಿದ್ದಾರೆ.
ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ಸೋಂಕು ಹರಡಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 510 ಪ್ರಕರಣಗಳು ದಾಖಲಾಗಿವೆ. ದಿಲ್ಲಿ 351, ಕೇರಳ 156, ಗುಜರಾತ್ 136, ತಮಿಳುನಾಡಿನಲ್ಲಿ 121 ಮತ್ತು ರಾಜಸ್ಥಾನದಲ್ಲಿ 120 ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಕರ್ನಾಟಕದಲ್ಲಿ ಈವರೆಗೆ 76 ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಶಸ್ತ್ರಚಿಕಿತ್ಸೆ ಇಲ್ಲದೇ ವೆರಿಕೋಸ್ ವೇಯ್ನ್ ನೋವನ್ನು ಪರಿಹರಿಸಿಕೊಳ್ಳಬಹುದೇ? ಇಲ್ಲಿದೆ ಅಂಥದೊಂದು ಮಾರ್ಗ