Select Your Language

Notifications

webdunia
webdunia
webdunia
webdunia

ದೇಶಕ್ಕೆ ಕೋವಿಡ್‌ ಆತಂಕ: ಒಂದೇ ದಿನ 27,533 ಸೋಂಕಿತರು ಪತ್ತೆ

ದೇಶಕ್ಕೆ ಕೋವಿಡ್‌ ಆತಂಕ
ದೇಶದಲ್ಲಿ ಒಮಿಕ್ರಾನ್‌ ಕಾಲಿಟ್ಟ ನಂತರ ಕೋವಿಡ್‌ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 27,553 ಪ್ರಕರಣಗಳು ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಇಲಾಖೆ, ಕಳೆದ 24 ಗಂಟೆಗಳಲ್ಲಿ 27,553 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 1,22,801 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಒಂದೇ ದಿನ 284 ಮಂದಿ ಕೋವಿಡ್‌ ಗೆ ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ 9,249 ಮಂದಿ ಗುಣಮುಖರಾಗಿದ್ದು, ಇದರೊಂದಿಗೆ ಈವರೆಗೆ 3,42,84,561 ಜನ ಚೇತರಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಇದರ ನಡುವೆ ಒಮಿಕ್ರಾನ್‌ ಸೋಂಕಿತರ ಪ್ರಕರಣ ಕೂಡ ಹೆಚ್ಚಾಗಿದ್ದು, ದೇಶದಲ್ಲೀಗ 1,525 ಮಂದಿ ಒಮಿಕ್ರಾನ್‌ ಸೋಂಕಿತರಿದ್ದಾರೆ. ಮಹಾರಾಷ್ಟ್ರದಲ್ಲಿ 460. ದೆಹಲಿ-351 ಸೋಂಕಿತರು ಪತ್ತೆಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಎಂ-ಕಿಸಾನ್‌ ನಿಧಿ; 20,900 ಕೋಟಿ ಬಿಡುಗಡೆ