Select Your Language

Notifications

webdunia
webdunia
webdunia
webdunia

ಕರೊನಾ ಹೆಚ್ಚಳವಾದರೆ ಲಾಕ್ ಡೌನ್ ಮಾಡಿ ತಜ್ಞರ ಶಿಫಾರಸು

ಕರೊನಾ ಹೆಚ್ಚಳವಾದರೆ ಲಾಕ್ ಡೌನ್ ಮಾಡಿ ತಜ್ಞರ ಶಿಫಾರಸು
ಬೆಂಗಳೂರು , ಭಾನುವಾರ, 2 ಜನವರಿ 2022 (17:21 IST)
ರಾಜ್ಯದಲ್ಲಿ ಮೂರನೇ ಅಲೆ ಬರುವ ಸಾಧ್ಯತೆಯಿದ್ದು, ಒಂದು ವೇಳೆ ಕೋವಿಡ್ ಪ್ರಕರಣಗಳು ಹೆಚ್ಚಳವಾದರೆ ಸೆಮಿ ಲಾಕ್‍ಡೌನ್ ಇಲ್ಲವೇ ಕಠಿಣ ನಿಯಮಗಳನ್ನು ಜಾರಿಗೊಳಿಸುವುದು ಬಹುತೇಕ ಖಚಿತವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದ್ದು, ಶೇ.5ಕ್ಕಿಂತ ಪಾಸಿಟಿವ್ ದರ ಹೆಚ್ಚಾದರೆ ಅನಿವಾರ್ಯವಾಗಿ ಲಾಕ್‍ಡೌನ್ ಮಾಡಬೇಕೆಂದು ಸಲಹೆ ಮಾಡಿದೆ.
 
ಕಳೆದ ಒಂದು ವಾರದಿಂದ ದೇಶದ ಪ್ರಮುಖ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತದೆ. ಕರ್ನಾಟಕದಲ್ಲೂ ಮೂರು ದಿನದಿಂದ ಪ್ರಕರಣಗಳು ಏರುಮುಖವಾಗುತ್ತಿದ್ದು. ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಹಾಗೂ ಶೇ.40ಕ್ಕಿಂತ ಹೆಚ್ಚು ಐಸಿಯು ಬೆಡ್ ರೋಗಿಗಳ ಸಂಖ್ಯೆ ಹೆಚ್ಚಳವಾದರೆ ಲಾಕ್‍ಡೌನ್ ಮಾಡಲೇಬೇಕೆಂದು ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ.
 
ರಾಜ್ಯ ಸರ್ಕಾರ ತಕ್ಷಣವೇ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕದೊಂಡು ಕೋವಿಡ್ ನಿಯಂತ್ರಿಸಲು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಇದನ್ನು ತಡೆಯದಿದ್ದರೆ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
 
ಈಗ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತಾಂತ್ರಿಕ ಸಲಹಾ ಸಮಿತಿ ಮಹಾರಾಷ್ಟ್ರ, ಕೇರಳ, ತಮಿಳುನಾಡು ಹಾಗೂ ವಿದೇಶದಿಂದ ಬರುವವರ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಆದರೆ ಹೊರ ರಾಜ್ಯದಿಂದ ಬರುತ್ತಿರುವವರ ಮೇಲೆ ನಿಗಾವಹಿಸುತ್ತಿಲ್ಲ ಎಂದು ಸಮಿತಿ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿಗೆ ಟಫ್ ರೂಲ್ಸ್