Select Your Language

Notifications

webdunia
webdunia
webdunia
webdunia

ರಾತ್ರಿ 10ಗಂಟೆವರೆಗೂ ಲಸಿಕೆ ನೀಡಬಹುದು

ರಾತ್ರಿ 10ಗಂಟೆವರೆಗೂ ಲಸಿಕೆ ನೀಡಬಹುದು
ನವದೆಹಲಿ , ಸೋಮವಾರ, 10 ಜನವರಿ 2022 (15:01 IST)
ಕೊವಿಡ್ 19 ಲಸಿಕೆ ನೀಡುವ ಕೇಂದ್ರಗಳಿಗೆ ಸಮಯ ಮಿತಿ ಇಲ್ಲ.

ರಾತ್ರಿ 10ಗಂಟೆವರೆಗೂ ಕೊರೊನಾ ಲಸಿಕೆಯನ್ನು ಕೊಡಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ, ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ.

ಸಂಜೆಯೊಳಗೆ ಲಸಿಕಾ ಕೇಂದ್ರಗಳನ್ನು ಬಂದ್ ಮಾಡಬೇಕು ಎಂದು ಎಲ್ಲಿಯೂ ನಿಮಗಳಿಲ್ಲ, ಆಯಾ ರಾಜ್ಯಗಳ, ಆಯಾ ಪ್ರದೇಶಗಳಲ್ಲಿನ ಬೇಡಿಕೆ, ಅಗತ್ಯಗಳಿಗೆ ತಕ್ಕಂತೆ ಕೊವಿಡ್ 19 ಲಸಿಕೆ ನೀಡುವ ಸಮಯವನ್ನು ನಿಗದಿಗೊಳಿಸಿಕೊಳ್ಳಬಹುದು.

ಲಸಿಕಾ ಕೇಂದ್ರಗಳಲ್ಲಿ ಸುಮ್ಮನೆ ಒತ್ತಡಕ್ಕೆ ಒಳಗಾಗುವ ಬದಲು, ಜನರು ಹೆಚ್ಚಿದ್ದರೂ ಕೊರೊನಾ ಲಸಿಕೆ ನೀಡುವ ಅವಧಿ ಮುಗಿಯಿತು ಎಂದು ಹೇಳಿ ಕಳಿಸುವ ಬದಲು,

ಅಗತ್ಯಕ್ಕನುಗುಣವಾಗಿ ರಾತ್ರಿ 10ರವರೆಗೂ ಕೊರೊನಾ ಲಸಿಕೆ ನೀಡಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಾ ಮನೋಹರ್ ಅಗ್ನಾನಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಾವು ಬೆಳೆಗಾರರಿಗೆ ಸಿಹಿ ಸುದ್ದಿ