Select Your Language

Notifications

webdunia
webdunia
webdunia
webdunia

ಮಾವು ಬೆಳೆಗಾರರಿಗೆ ಸಿಹಿ ಸುದ್ದಿ

ಮಾವು ಬೆಳೆಗಾರರಿಗೆ ಸಿಹಿ ಸುದ್ದಿ
ನವದೆಹಲಿ , ಸೋಮವಾರ, 10 ಜನವರಿ 2022 (14:26 IST)
ನವದೆಹಲಿ : ಮಾವು ಬೆಳೆಗಾರರಿಗೆ ಸಿಹಿ ಸುದ್ದಿ ಸಿಕ್ಕಿದೆ.

ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಮಾವು ಮತ್ತು ಉಪ ಉತ್ಪನ್ನಗಳನ್ನು ರಫ್ತು ಮಾಡುವ ಕಾರ್ಯಕ್ಕೆ ಶೀಘ್ರವೇ ಚಾಲನೆ ಸಿಗಲಿದೆ.

ಮಾವು ರಫ್ತುಗೆ ಸಂಬಂಧಿಸಿದಂತೆ ಭಾರತ ಮತ್ತು ಯುಎಸ್ ನಿಯಮಗಳನ್ನು ಸರಳಗೊಳಿಸಲು ಒಪ್ಪಿಕೊಂಡಿವೆ ಎಂದು ಆಹಾರ ಉತ್ಪನ್ನಗಳ ರಫ್ತು ಉತ್ಪನ್ನಗಳ ರಫ್ತಿನ ಜವಾಬ್ದಾರಿ ಹೊತ್ತಿರುವ ಸಂಸ್ಥೆ `ಅಪೆಡಾ’ ತಿಳಿಸಿದೆ.

ಇನ್ನು ನಾಲ್ಕು ತಿಂಗಳಲ್ಲಿ ಮಾವಿನ ಋತು ಆರಂಭವಾಗಲಿದೆ. ಈ ಹೊತ್ತಿನಲ್ಲೇ ಭಾರತವು ಯುಎಸ್ಗೆ ಮಾವು ರಫ್ತು ಮಾಡುವ ಬಗ್ಗೆ ಒಪ್ಪಂದ ಮಾಡಿಕೊಂಡಿದೆ. ಜೊತೆಗೆ ದಾಳಿಂಬೆ ರಫ್ತು ಕೂಡ ಶೀಘ್ರದಲ್ಲೇ ಪ್ರಾರಂಭವಾಗುವುದು ಎಂದು ಅಪೆಡಾ ಅಧ್ಯಕ್ಷ ಎಂ. ಅಂಗಮುತ್ತು ತಿಳಿಸಿದ್ದಾರೆ.

ಭಾರತದ ಮಾವು ಮತ್ತು ದಾಳಿಂಬೆ ರಫ್ತಿಗೆ ಪ್ರತಿಯಾಗಿ ಅಮೆರಿಕವು ಅಮೆರಿಕನ್ ಚೆರ್ರಿ ಹಣ್ಣನ್ನು ನೀಡಿಲಿದೆ. ಈ ಸಂಬಂಧ ಎರಡೂ ದೇಶಗಳ ನಡುವೆ ಒಪ್ಪಂದವಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ಭೀತಿ: ವಿಷ ಸೇವಿಸಿದ ಕುಟುಂಬ!