ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ಮಾತ್ರವಲ್ಲ, ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ಇದೀಗ ವಿದೇಶೀ ಮಹಿಳೆಯೊಬ್ಬರು ಪುನೀತ್ ಸಮಾಧಿ ನೋಡಲೆಂದೇ ಬೆಂಗಳೂರಿಗೆ ಬಂದಿದ್ದಾರೆ.
									
			
			 
 			
 
 			
			                     
							
							
			        							
								
																	ಕ್ಯಾಲಿಫೋರ್ನಿಯಾದ ಲಿಂದಾ ಎಂಬ ಹೆಸರಿನ ಮಹಿಳೆ ಪುನೀತ್ ರ ಅಪ್ಪಟ ಅಭಿಮಾನಿಯಂತೆ. ಇದೇ ಕಾರಣಕ್ಕೆ ಅವರ ಸಮಾಧಿ ನೋಡಲು ಅಮೆರಿಕಾದಿಂದ ಇಲ್ಲಿಗೆ ಬಂದಿದ್ದಾರೆ.
									
										
								
																	ಎರಡು ವರ್ಷಗಳಿಂದ ಅವರ ಸಿನಿಮಾ ನೋಡುತ್ತಿದ್ದೆ. ಕನ್ನಡ ಅರ್ಥವಾಗಲ್ಲ. ಹಾಗಿದ್ದರೂ ಸಬ್ ಟೈಟಲ್ ಮೂಲಕ ನೋಡುತ್ತಿದ್ದೆ ಎಂದಿದ್ದಾರೆ.