Select Your Language

Notifications

webdunia
webdunia
webdunia
webdunia

ಗುತ್ತಿಗೆ ಬದಲು ನೇರ ವೇತನಕ್ಕೆ ಒಳಪಡಿಸಲು ಒತ್ತಾಯ

ಗುತ್ತಿಗೆ ಬದಲು ನೇರ ವೇತನಕ್ಕೆ ಒಳಪಡಿಸಲು ಒತ್ತಾಯ
belagavi , ಶನಿವಾರ, 18 ಡಿಸೆಂಬರ್ 2021 (20:44 IST)
ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪ.ಪಂ ಹೊರಗುತ್ತಿಗೆ ವಾಹನ ಚಾಲಕರು, ವಾಟರ್ ಮೆನ್, ಡಾಟ
ಗುತ್ತಿಗೆ ಪದ್ಧತಿಯನ್ನು ಬದಲಿಸುವ ಪೌರ ಕಾರ್ಮಿಕರ ಮಾದರಿಯಲ್ಲಿ ವೇತನಕ್ಕೆ ಒಳಪಡಿಸಲು ಒತ್ತಾಯಿಸಿ ಡಿ.22 ರಂದು ಬೆಳಗಾವಿಯ ಸುವರ್ಣ ಸೌಧದ ಬಳಿ ಧರಣಿ ನಡೆಸಲಾಯಿತು ಎಂದು ಬೆಳಗಾವಿಯ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಪ್ರಾರಂಭಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಹೊರಗುತ್ತಿಗೆ ನೌಕರರು ಅತ್ಯಂತ ತಳಸ್ತರಕ್ಕೆ ಸೇರಿದವರಾಗಿದ್ದು, ಸಕಾಲಕ್ಕೆ ವೇತನ ಸಿಗುತ್ತಿಲ್ಲ. ಗುತ್ತಿಗೆ ಹೆಸರಿನ ಸರಕಾರಿ ಜೀತಗಾರಿಕೆಯಲ್ಲಿ ಗುತ್ತಿಗೆ ಏಜೆನ್ಸಿಗಳ ಶೋಷಣೆಗೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಈ ನೌಕರರಿಗೆ ನೇರ ವೇತನ ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಡಿ.22 ರಂದು ಬೆಳಗ್ಗೆ 11 ಗಂಟೆಗೆ ಬೆಳಗಾವಿ ಸುವರ್ಣ ಸೌಧದ ಬಳಿ ಧರಣಿ ನಡೆಸುವ ಮೂಲಕ ನೇರ ವೇತನ ಜಾರಿಗೆ ಒತ್ತಾಯಿಸಲಾಗುವುದೆಂದರು.
ತಲಾ 500 ಮಂದಿ ಜನಸಂಖ್ಯೆಗೆ ಒಬ್ಬರಂತೆ ಪೌರಕಾರ್ಮಿಕರನ್ನು ನಿಯೋಜಿಸಿ ಬಾಕಿ ಉಳಿದಿರುವ ಪೌರಕಾರ್ಮಿಕರ ಹುದ್ದೆಗಳ ಎರಡನೇ ಹಂತದ ನೇರ ನೇಮಕಾತಿಗೆ ಚಾಲನೆ ನೀಡಬೇಕು, ಚಾಲಕರಿಗೂ ಬೆಳಗಿನ ಉಪಹಾರ, ವಿಮೆ, ಆರೋಗ್ಯ ತಪಾಸಣೆ ಹಾಗೂ ಸಿ ಗ್ರೂಪಿಗನುಗುಣವಾಗಿ ವೇತನ ನಿಗದಿಪಡಿಸಬೇಕು, ನಗರ ಸ್ಥಳೀಯ ಹೊರಗುತ್ತಿಗೆ ನೌಕರರಿಗೂ ಗೃಹಭಾಗ್ಯ ಮಾದರಿಯ ವಸತಿ ಯೋಜನೆ ವಿಸ್ತರಿಸಬೇಕು, ಅಗತ್ಯಕ್ಕನುಗುಣವಾಗಿ ಕಾಲಕಾಲಕ್ಕೆ ಪೌರಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿಯನ್ನು ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಈರಪ್ಪ ಶೆಟ್ಟಿ, ಉಪಾಧ್ಯಕ್ಷ ಬೋಪಣ್ಣ, ಖಜಾಂಚಿ ಕಬೀರ್, ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಜಿಲ್ಲಾ ಕಾರ್ಯದರ್ಶಿ ರಮೇಶ್ ಕುಟ್ಟಪ್ಪ ಇದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

11 ಲಕ್ಷ ರೂ. ಲಾಭದಲ್ಲಿ ಕಾಫಿ ಬೆಳೆಗಾರರ ಸಹಕಾರ ಸಂಘ