Publish Date: Sat, 18 Dec 2021 (17:28 IST)
Updated Date: Sat, 18 Dec 2021 (15:34 IST)
ಬೆಳಗಾವಿಯಲ್ಲಿ ನಿನ್ನೆ ತಡರಾತ್ರಿ ಎಂಇಎಸ್ ಪುಂಡರು ಪುಂಡಾಟಿಕೆ ಮೆರೆದಿದ್ದು, ಈ ಹಿನ್ನೆಲೆ ಕುಂದಾನಗರಿಯಲ್ಲಿ ಬಿಗುವಿನ ವಾತಾವಾರಣ ನಿರ್ಮಾಣವಾಗಿದೆ. MES ಪುಂಡರ ಈ ಪುಂಡಾಟಿಕೆಗೆ ಇಡೀ ರಾಜ್ಯವೇ ತೀವ್ರ ಆಕ್ರೋಶ ಹೊರ ಹಾಕುತ್ತಿದ್ದು, ಇದೀಗ ಇಂಥಾ ಪುಂಡಾಟವನ್ನು ಯಾರೂ ಸಹಿಸಲು ಸಾಧ್ಯವಿಲ್ಲ ಎಂದು MES ಪುಂಡಾಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಕ್ರೋಶ ಹೊರಹಾಕಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇಂಥಾ ಪುಂಡಾಟವನ್ನು ಯಾರೂ ಸಹಿಸಲು ಸಾಧ್ಯವಿಲ್ಲ, ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ ಮಾಡಿದ್ದು ಖಂಡನೀಯವಾಗಿದೆ. ಎಂಇಎಸ್ನ ಕನ್ನಡದ್ರೋಹಿ, ನಾಡದ್ರೋಹಿ ಕೃತ್ಯ ಶಿಕ್ಷಾರ್ಹವಾಗಿದೆ. ಇಂಥಾ ಪುಂಡರನ್ನು ಅರೆಸ್ಟ್ ಮಾಡಿ ಜೈಲಿಗೆ ತಳ್ಳಬೇಕು ಎಂದು MES ಪುಂಡಾಟಕ್ಕೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.