Select Your Language

Notifications

webdunia
webdunia
webdunia
webdunia

ಪ್ರಿಯಕರನ ಸಾವಿನಿಂದ ಆ ಪ್ರಿಯತಮೆ ಮಾಡಿದ್ದಾದ್ರು ಏನು?!

ಪ್ರಿಯಕರನ ಸಾವಿನಿಂದ ಆ ಪ್ರಿಯತಮೆ ಮಾಡಿದ್ದಾದ್ರು ಏನು?!
ಕಲಬುರಗಿ , ಶನಿವಾರ, 18 ಡಿಸೆಂಬರ್ 2021 (08:04 IST)
ಕಲಬುರಗಿ : ಪ್ರಿಯಕರನ ಸಾವಿನಿಂದ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕ್ವಾಟರ್ಸ್ನಲ್ಲಿ ನಡೆದಿದೆ.

ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಶೃತಿ (18) ಆತ್ಮಹತ್ಯೆಗೆ ಶರಣಾದ ಯುವತಿ. ಒಂದು ತಿಂಗಳ ಹಿಂದೆಯಷ್ಟೇ ಆಕೆಯ ಪ್ರಿಯಕರ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದ. 

ಪ್ರಿಯತಮನ ಸಾವಿನಿಂದ ಮನನೊಂದು ಕೆಲವು ದಿನಗಳ ಹಿಂದೆ ಆಹಾರವನ್ನು ಶೃತಿ ತ್ಯಜಿಸಿದ್ದಳು ಎಂದು ಆಕೆಯ ಪೋಷಕರು ಹೇಳಿದ್ದಾರೆ.
ಈಕೆಯ ಹಳೆ ನೆನಪನ್ನು ಮರೆಸುವ ಸಲುವಾಗಿ ಮನೆಯವರು ಸಂಬಂಧಿಕ ಯುವಕನೊಂದಿಗೆ ಮದುವೆ ಮಾಡಲು ನಿಶ್ಚಯಿಸಿದ್ದರು. ಕೋಪಗೊಂಡ ಯುವತಿ ನಿನ್ನೆ ಸಂಜೆ ಮನೆಯಲ್ಲಿ ಯಾರು ಇಲ್ಲದಿರುವ ಸಂದರ್ಭವನ್ನು ನೋಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮೋದಿ ಮತ್ತೆ ಉತ್ತರ ಪ್ರದೇಶಕ್ಕೆ ಭೇಟಿ! ಕಾರಣವೇನು?