Select Your Language

Notifications

webdunia
webdunia
webdunia
webdunia

ಯುವತಿ ಆತ್ಮಹತ್ಯೆ ಯತ್ನ, ಸಾಕ್ಷ್ಯ ನೀಡುವಂತೆ ನೋಟಿಸ್ ಜಾರಿ

ಯುವತಿ ಆತ್ಮಹತ್ಯೆ ಯತ್ನ, ಸಾಕ್ಷ್ಯ ನೀಡುವಂತೆ ನೋಟಿಸ್ ಜಾರಿ
bangalore , ಬುಧವಾರ, 15 ಡಿಸೆಂಬರ್ 2021 (13:04 IST)
ಅನುಷಾ ಉಷಾರಾಣಿ ಇದ್ದ ಮನೆ ಮುಂಭಾಗವೇ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಅನುಷಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಡಿಸ್ಚಾರ್ಜ್ ಕೂಡ ಆಗಿದೆ.ಬೆಂಗಳೂರು: ಫೇಸ್‌ಬುಕ್‌ನಲ್ಲಿ ಯುವತಿ ಬಗ್ಗೆ ಮಹಿಳೆ ಅವಹೇಳನವಾಗಿ ಮಾತನಾಡಿದ ಹಿನ್ನೆಲೆ ಮಹಿಳೆಯ ಮನೆಯ ಮುಂದೆ ಮಾತ್ರೆ ಸೇವಿಸಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಬನಶಂಕರಿಯ 3ನೇ ಹಂತ ಕತ್ರಿಗುಪ್ಪೆಯಲ್ಲಿ ನಡೆದಿದೆ. ಉಷಾರಾಣಿ ಮನೆ ಮುಂದೆ ಆತ್ಮಹತ್ಯೆ ಯತ್ನ ಮಾಡಿದ ಯುವತಿ ಅನುಷಾ(25). ಡಿಸೆಂಬರ್ 12ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
 
ಯುವತಿ ತಾಯಿ ಗೀತಾದೇವಿ, ಉಷಾರಾಣಿ ಮತ್ತು ಉಮಾದೇವಿ ಒಂದೇ ಮಹಿಳಾ ಸಂಘಟನೆಯಲ್ಲಿ ಇದ್ದವರು. ವೈಯಕ್ತಿಕ ಕಾರಣಗಳಿಂದಾಗಿ ಈಗ ಬೇರೆ ಬೇರೆಯಾಗಿದ್ದಾರೆ. ಸದ್ಯ ಈಗ ಉಮಾದೇವಿ ಮತ್ತು ಉಷಾರಾಣಿ ಒಟ್ಟಿಗೆ ಇದ್ದಾರೆ. ಗೀತಾದೇವಿ ಮಾತ್ರ ಇಬ‌್ಬರಿಂದಲೂ ದೂರವಾಗಿ ಬೇರೆಯಾಗಿದ್ದಾಳೆ. ಇವರುಗಳ ಮಧ್ಯೆ ಆಗಾಗ ಆರೋಪ-ಪ್ರತ್ಯಾರೋಪದ ಫೇಸ್ ಬುಕ್ ವಿಡಿಯೋ ವಾರ್ ನಡೆಯುತ್ತಲೇ ಇರ್ತಿತ್ತು.
[11:56, 12/15/2021] Geethanjali: ಇತ್ತೀಚೆಗೆ ಉಷಾರಾಣಿ, ಅನುಷಾ ತಾಯಿ ಗೀತಾದೇವಿ ವಿರುದ್ಧ ಅವಹೇಳನ ವಿಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಳು. ಈ ವಿಡಿಯೋವನ್ನು ಉಮಾದೇವಿ ಮಾಡಿಸಿದ್ದಾಳೆಂದು ಯುವತಿ ತಾಯಿ ಗೀತಾದೇವಿ ಆರೋಪಿಸಿದ್ದಾರೆ. ಅಲ್ಲದೇ ಯುವತಿ ಅನುಷಾ ಬಗ್ಗೆಯೂ ವಿಡಿಯೋದಲ್ಲಿ ಅವಹೇಳನಕಾರಿಯಾಗಿ ಮಾತನಾಡಲಾಗಿದೆ. “ಅನುಷಾ ವೇಶ್ಯಾವಾಟಿಕೆಯಲ್ಲಿ ಸಿಕ್ಕಿಹಾಕಿಮೊಂಡಿದ್ಳು” “ಕಾಲು ಹಿಡಿದು ಬಚಾವಾಗಿ ಬಂದಿದ್ದಾಳೆ, ಮನೆಯನ್ನೇ ಲಾಡ್ಜ್ ಅನ್ನಾಗಿ ಮಾಡಿಕೊಂಡಿದ್ದೀಯಾ ಎಂದು ವಿಡಿಯೋದಲ್ಲಿ ಉಷಾರಾಣಿ ಕೇಳಿದ್ದಾಳೆ.” ಈ ಹಿನ್ನೆಲೆ ಇದನ್ನು ಪ್ರಶ್ನಿಸಲು ಉಷಾರಾಣಿಯ ಕತ್ರಿಗುಪ್ಪೆ ಮನೆ ಬಳಿ ಅನುಷಾ ಬಂದಿದ್ದಾಳೆ. ಆದ್ರೆ ಅಲ್ಲಿಯ ಸ್ಥಳೀಯರು ಉಷಾರಾಣಿ ಮನೆಯಲ್ಲಿ ಇಲ್ಲ, ಮನೆ ಖಾಲಿ ಮಾಡಿದ್ದಾಳೆಂದು ತಿಳಿಸಿದ್ದಾರೆ.
 
ಬಳಿಕ ಮತ್ತೆ ಸ್ನೇಹಿತರಿಗೆ, ನೆರೆಹೊರೆಯವರಿಗೆ ಹೇಗೆ ಮುಖ ತೋರಿಸಲಿ ಎಂದು ಯೋಚಿಸಿದ್ದ ಅನುಷಾ ಉಷಾರಾಣಿ ಇದ್ದ ಮನೆ ಮುಂಭಾಗವೇ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಅನುಷಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಡಿಸ್ಚಾರ್ಜ್ ಕೂಡ ಆಗಿದೆ. ಘಟನೆ ಸಂಬಂಧ ಉಮಾದೇವಿ, ಉಷಾರಾಣಿ, ಶಿವಣ್ಣ, ಚಾಯಾದೇವಿ, ಶರ್ಮಾ ಸೇರಿದಂತೆ ಐವರ ವಿರುದ್ಧ ಸಿ.ಕೆ.ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಾಗಿದೆ. ಅನುಷಾ ತಾಯಿ ಗೀತಾದೇವಿ ಮೇಲೂ ಹಲವು ದೂರುಗಳಿವೆ. ಉಮಾದೇವಿ ಮತ್ತು ಉಷಾರಾಣಿ ವಿರುದ್ಧವೂ ವಿವಿಧ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ವೈಯಕ್ತಿಕ ಕಾರಣಗಳಿಂದ ದೂರು ಪ್ರತಿ ದೂರು ನೀಡಿರುವ ಶಂಕೆ ವ್ಯಕ್ತವಾಗಿದೆ. ಇದೀಗ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಗೆ ಸಿ.ಕೆ.ಅಚ್ಚುಕಟ್ಟು ಪೊಲೀಸರು ನೋಟಿಸ್ ಜಾರಿ ಮಾಡಿದ್ದು ಸಾಕ್ಷ್ಯ ನೀಡುವಂತೆ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಶನ್​ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್​ ಆಗಿ ಡ್ರಗ್ ಪೆಡ್ಲರ್ !