Select Your Language

Notifications

webdunia
webdunia
webdunia
webdunia

ಕಾನೂನಿಗೆ ಎಲ್ಲರೂ ಸಾಮಾನ್ಯರೇ -ಗೃಹಸಚಿವ ಅರಗ ಜ್ಞಾನೇಂದ್ರ

ಕಾನೂನಿಗೆ ಎಲ್ಲರೂ ಸಾಮಾನ್ಯರೇ  -ಗೃಹಸಚಿವ ಅರಗ ಜ್ಞಾನೇಂದ್ರ
bangalore , ಶನಿವಾರ, 18 ಡಿಸೆಂಬರ್ 2021 (16:18 IST)
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾನಿ ಪ್ರಕರಣದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಿಡಿಕಾರಿದ್ದು, ಒಂದೆರಡು ದಿನಗಳಿಂದ ಬೆಳಗಾವಿಯಲ್ಲಿ ಕೆಲವು ಜನ ಪುಂಡತನದ ಕೆಲಸ ಮಾಡುತ್ತಿದ್ದಾರೆ, ಇಂಥದ್ದನ್ನೆಲ್ಲಾ ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸರ್ಕಾರಿ ವಾಹನವನ್ನ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ, ಅಲ್ಲದೇ ರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿದ್ದಾರೆ. ಪೊಲೀಸರಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶವನ್ನು ನೀಡಿದ್ದು,
ಯಾರೇ ಆದರೂ ಮುಖ, ಮುಲಾಜು ನೋಡದೇ ಕ್ರಮ ಜರುಗಿಸಲು ಹೇಳಿದ್ದೇನೆ. ಈವರೆಗೆ 27 ಮಂದಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ . ಸಂಗೊಳ್ಳಿ ರಾಯಣ್ಣ,ಶಿವಾಜಿ ಇವರೆಲ್ಲರೂ ರಾಷ್ಟ್ರಕ್ಕಾಗಿ ಹೋರಾಡಿದವರು, ರಾಷ್ಟೀಯ ನಾಯಕರನ್ನ ಚಪರಾಸಿ ರಾಜಕೀಯಕ್ಕೆ ಕೆಳಗೆ ಎಳೆಯಬೇಡಿ. ಪ್ರತಿಮೆ ಧ್ವಂಸ ಮಾಡಿದ ತಕ್ಷಣ ವಿಚಾರ ಹೋರಾಟ ಹಾಳಾಗುವುದಿಲ್ಲ, ಕಿಡಿಗೇಡಿಗಳ ವಿರುದ್ದ ಕರ್ನಾಟಕ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏರ್ಪೋರ್ಟ್ ನಲ್ಲಿ ನೆಗೆಟಿವ್ ಇದ್ರೂ ಮನೆಯಲ್ಲಿ ಕ್ವಾರಂಟೈನ್ ಕಡ್ಡಾಯ