Select Your Language

Notifications

webdunia
webdunia
webdunia
webdunia

ಲಸಿಕೆ ಇಲ್ಲ ಅಂದ್ರೆ, ವೇತನ ಇಲ್ಲ! ಗೂಗಲ್ ನಿರ್ಧಾರ

ಲಸಿಕೆ ಇಲ್ಲ ಅಂದ್ರೆ, ವೇತನ ಇಲ್ಲ! ಗೂಗಲ್ ನಿರ್ಧಾರ
ವಾಷಿಂಗ್ಟನ್ , ಗುರುವಾರ, 16 ಡಿಸೆಂಬರ್ 2021 (17:08 IST)
ವಾಷಿಂಗ್ಟನ್ : ಕೋವಿಡ್ ನಿಯಮಗಳನ್ನು ಅನುಸರಿಸದ ಹಾಗೂ ಲಸಿಕೆಯನ್ನು ಪಡೆಯದೇ ಇರುವ ಉದ್ಯೋಗಿಗಳಿಗೆ ಗೂಗಲ್ ವೇತನ ನೀಡುವುದನ್ನು ನಿಲ್ಲಿಸಿದೆ.
 
ಮಾತ್ರವಲ್ಲದೇ ಗೂಗಲ್ ಉದ್ಯೋಗಿಗಳಿಗೆ ಕೆಲಸದಿಂದ ವಜಾ ಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಹೌದು, ಗೂಗಲ್ ತನ್ನ ಉದ್ಯೋಗಿಗಳಿಗೆ ಡಿಸೆಂಬರ್ 3ರ ಒಳಗಾಗಿ ತಮ್ಮ ಲಸಿಕೆಗಳ ವಿವರವನ್ನು ಸಲ್ಲಿಸ ಬೇಕೆಂಬ ಸೂಚನೆ ನೀಡಿತ್ತು.

ಡಿಸೆಂಬರ್ 3ರ ಬಳಿಕವೂ ಯಾವುದೇ ವಿವರಗಳನ್ನು ಸಲ್ಲಿಸದ ಉದ್ಯೋಗಿಗಳನ್ನು ಗೂಗಲ್ ವೈಯಕ್ತಿಕವಾಗಿ ಸಂಪರ್ಕಿಸುವುದೆಂದು ಸೂಚನೆಯಲ್ಲಿ ತಿಳಿಸಿತ್ತು. ಇದೀಗ ಗೂಗಲ್ ಲಸಿಕೆಯನ್ನು ಪಡೆಯದೇ ಇರುವ ಉದ್ಯೋಗಿಗಳಿಗೆ ಜನವರಿ 18ರ ವರೆಗೆ ಸಮಯಾವಕಾಶ ನೀಡಿದೆ.

ಉದ್ಯೋಗಿಗಳು ಲಸಿಕೆಯನ್ನು ಪಡೆಯದೇ ಹೋದಲ್ಲಿ ಅವರಿಗೆ ವೇತನದೊಂದಿಗೆ 30 ದಿಗಳ ರಜೆಯನ್ನು ನೀಡಲಾಗುವುದು, ನಂತರ 6 ತಿಂಗಳ ವರೆಗೆ ವೇತನವಿಲ್ಲದ ವೈಯಕ್ತಿಕ ರಜೆಯಲ್ಲಿ ಇರಿಸಲಾಗುತ್ತದೆ ಎಂದಿದೆ.

ಒಂದುವೇಳೆ ಈ ಸಮಯಾವಕಾಶದಲ್ಲಿಯೂ ಉದ್ಯೋಗಿಗಳು ಲಸಿಕೆಯನ್ನು ತೆಗೆದುಕೊಂಡಿಲ್ಲವಾದಲ್ಲಿ ಕೆಲಸದಿಂದಲೇ ಅವರನ್ನು ವಜಾ ಗೊಳಿಸುವುದಾಗಿ ತಿಳಿಸಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸಭೆಯಲ್ಲಿ ಕ್ಯಾಪ್ಟನ್ ವರುಣ್ ಸಿಂಗ್‌ ಗಾಗಿ ಮೌನಾಚರಣೆ