Select Your Language

Notifications

webdunia
webdunia
webdunia
webdunia

ಟೆಡ್ಡಿ ಬಾಯ್ ಪ್ರಿಯಾಂಕ್ ಖರ್ಗೆ,ಅಸ್ಸಾಂ ಅಲ್ಲ ನಿನ್ನ ಕ್ಷೇತ್ರದ ಸಮಸ್ಯೆ ನೋಡ್ಕೋ: ಅಸ್ಸಾಂ ಬಿಜೆಪಿ

Priyank Kharge
ಬೆಂಗಳೂರು: ಅಸ್ಸಾಂಗೆ ಸೆಮಿ ಕಂಡಕ್ಟರ್ ಕೈಗಾರಿಕೆಗಳು ಹೋಗಿದ್ದಕ್ಕೆ ಟೀಕಿಸಿದ್ದ ಐಟಿ ಸಚಿವ ಪ್ರಿಯಾಂಕ್ ಖರ್ಗೆಗೆ ಈಗ ಅಸ್ಸಾಂ ಬಿಜೆಪಿ ಮತ್ತೆ ತಿರುಗೇಟು ನೀಡಿದೆ. ಟೆಡ್ಡಿ ಬಾಯ್ ಪ್ರಿಯಾಂಕ್ ಖರ್ಗೆ ಮೊದಲು ನಿಮ್ಮ ಕ್ಷೇತ್ರದ ಜನರನ್ನ ನೋಡ್ಕೊಳ್ಳಿ ಎಂದಿದೆ.

ಸೆಮಿಕಂಡಕ್ಟರ್ ಉದ್ಯಮಗಳು ಕರ್ನಾಟಕಕ್ಕೆ ಬರಬೇಕಿತ್ತು. ಆದರೆ ಬಿಜೆಪಿ ಆಡಳಿತವಿರುವ ಅಸ್ಸಾಂ ಮತ್ತು ಗುಜರಾತ್ ಗೆ ಯಾಕೆ ಹೋಗಿವೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಅಸ್ಸಾಂ ಸಿಎಂ ಹಿಮಂತ ಸಿಟ್ಟಿಗೆದ್ದು, ಫಸ್ಟ್ ಕ್ಲಾಸ್ ಈಡಿಯೆಟ್ ಎಂದು ಪ್ರಿಯಾಂಕ್ ರನ್ನು ಜರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅಸ್ಸಾಂ ಸಿಎಂ ಈ ರೀತಿಯ ಹೇಳಿಕೆ ನೀಡುವ ಬದಲು ತಮ್ಮ ರಾಜ್ಯದ ಅಭಿವೃದ್ಧಿ ಬಗ್ಗೆ ಕ್ರಮ ಕೈಗೊಳ್ಳಲಿ ಎಂದಿದ್ದರು. ಇದಕ್ಕೀಗ ಅಸ್ಸಾಂ ಬಿಜೆಪಿ ಘಟಕ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ತಿರುಗೇಟು ಕೊಟ್ಟಿದೆ.

ಪ್ರಿಯಾಂಕ್ ಖರ್ಗೆಯನ್ನು ಟೆಡ್ಡಿ ಬಾಯ್ ಎಂದು ಕರೆದಿರುವ ಅಸ್ಸಾಂ ಬಿಜೆಪಿ ನಮ್ಮ ರಾಜ್ಯದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ನಿಮ್ಮ ಕ್ಷೇತ್ರದ ಜನರ ಕಷ್ಟಗಳನ್ನು ಪರಿಹರಿಸಿ. ದಕ್ಷಿಣ ಭಾರತದಲ್ಲಿ ಕಡುಬಡತನದ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯೇ ಮುಂದಿದೆ ಎಂದು ಕೇಳಿದ್ದೇವೆ. ಏನು ಮಾಡ್ತಿದೆ ನಿಮ್ಮ ಟ್ಯಾಲೆಂಟ್ ಟ್ಯಾಂಕ್ ಎಂದು ವ್ಯಂಗ್ಯ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟನೆಲ್ ರೋಡ್ ಅತ್ಲಾಗಿ ಇರಲಿ ಸ್ವಾಮಿ, ಮೊದಲು ಸಂಬಳ ಕೊಡಿ: ಆರ್ ಅಶೋಕ್