Select Your Language

Notifications

webdunia
webdunia
webdunia
webdunia

ಮಹಿಳೆ ರಸ್ತೆ ಗುಂಡಿಗೆ ಬಲಿಯಾಗ್ತಿದಂತೆ ರಾತ್ರೋರಾತ್ರಿ ಗುಂಡಿಮುಚ್ಚಲು ಮುಂದಾದ ಪಾಲಿಕೆ

ಮಹಿಳೆ ರಸ್ತೆ ಗುಂಡಿಗೆ ಬಲಿಯಾಗ್ತಿದಂತೆ ರಾತ್ರೋರಾತ್ರಿ ಗುಂಡಿಮುಚ್ಚಲು ಮುಂದಾದ ಪಾಲಿಕೆ
bangalore , ಮಂಗಳವಾರ, 18 ಅಕ್ಟೋಬರ್ 2022 (16:08 IST)
ಬೆಂಗಳೂರಿನಲ್ಲಿ ರಕ್ಕಸ ರಸ್ತೆ ಗುಂಡಿ‌ಗೆ ಮಹಿಳೆ ಬಲಿಯಾಗ್ತಿದಂತೆ ಬಿಬಿಎಂಪಿ ಎಚ್ಚೇತ್ತುಕೊಂಡಿದೆ.ವಾಹನ ಸವಾರರ ಸಾವಿನಿಂದ ಎಚ್ಚೆತ್ತ ಬಿಬಿಎಂಪಿ ಆಡಳಿತ ವರ್ಗ ಬೆಳ್ಳಂಬೆಳಗ್ಗೆನೇ  ಸ್ವತಃ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಫೀಲ್ಡ್ ಗಿಳಿದಿದ್ದಾರೆ.
 
ನಿನ್ನೆ ಅಪಘಾತವಾದ ಸುಜಾತ ಥಿಯೇಟರ್ ಬಳಿ ಪರಿಶೀಲನೆ ನಡೆಸಲು ಆರಂಭಿಸಿದ ತುಷಾರ್ ಗಿರಿನಾಥ್ ಗುಂಡಿ ಬಿದ್ದಿರುವ ಸ್ಥಳದಲ್ಲಿ ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದ್ದಾರೆ.ರಾತ್ರೋರಾತ್ರಿ ರಸ್ತೆಗುಂಡಿಗಳನ್ನ ಪಾಲಿಕೆ ಅಧಿಕಾರಿಗಳು ಮುಚ್ಚಿದ್ದಾರೆ.ಚೀಫ್ ಆಯುಕ್ತರಿಂದ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಕಾಲ್ನಡಿಗೆ ಜಾತಾ ನಡೆಸಿ ಸಾರ್ವಜನಿಕರು ಹಾಗೂ ಸಿಟಿಯ ಸಮಸ್ಯೆಗಳ ಖುದ್ದು ಆಯುಕ್ತರು ಪರಿವೀಕ್ಷಣೆ ಮಾಡಿದ್ದಾರೆ.ಇನ್ನೂ ಸಿಟಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 
ಈ ವೇಳೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್  ಸುಜಾತ ಥಿಯೇಟರ್ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ್ದಾರೆ. ರಸ್ತೆಗುಂಡಿ ಇರುವುದನ್ನು ಒಪ್ಪಿಕೊಂಡಿದ್ದಾರೆ.ಅಧಿಕಾರಿಗಳು ಸದ್ಯಕ್ಕೆ ಗುಂಡಿ ಮುಚ್ಚಿದ್ದಾರೆ.ವರ್ಷಕ್ಕೆ ರಸ್ತೆ ಗುಂಡಿ ಮುಚ್ಚುವುದಕ್ಕೆ 30 ಕೋಟಿ ಖರ್ಚು ಮಾಡುತ್ತೇವೆ.ಪ್ರತಿ ವರ್ಷ ಮೂವತ್ತು ಸಾವಿರ ರಸ್ತೆ ಗುಂಡಿ ಮುಚ್ಚುತ್ತೇವೆ.ಈ ವರ್ಷ 22 ಸಾವಿರ ಮುಚ್ಚುತ್ತಿದ್ದೇವೆ .ಮಹಿಳಾ ಸಾವಿನ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.ಪೊಲೀಸರ ವರದಿ ಆಧರಿಸಿ ಮುಂದಿನ ಕ್ರಮ  ತೆಗೆದುಕೊಳ್ತೇನೆ.ಪರಿಹಾರ ನೀಡುವ ಬಗ್ಗೆ ವರದಿ ಬಂದ ನಂತರ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮಾಜ್ ವಿವಾದ : ವಿವಿಯಿಂದ ಹೊರನಡೆದ 60 ನೈಜೀರಿಯಾ ವಿದ್ಯಾರ್ಥಿಗಳು?