Publish Date: Sun, 06 Oct 2019 (12:50 IST)
Updated Date: Sun, 06 Oct 2019 (12:54 IST)
ಐನಾತಿ ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ ಅಧಿಕಾರಿಗಳು, ಪೊಲೀಸರು ರಂಗೋಲಿ ಕೆಳೆಗೆ ನುಗ್ತಾರೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.
ಚಿನ್ನ, ವಜ್ರವನ್ನು ಹಲವು ಅಕ್ರಮ ಮಾರ್ಗಗಳ ಮೂಲಕ ಸಾಗಾಟ ಮಾಡ್ತಾರೆ. ಈ ಹಿಂದೆ ಹೊಟ್ಟೆ, ಎದೆ, ಗುಪ್ತಾಂಗದಲ್ಲೆಲ್ಲಾ ಚಿನ್ನವನ್ನು ಅಕ್ರಮವಾಗಿ ಸಾಗಿಸೋಕೆ ಯತ್ನಿಸಿ ಸಿಕ್ಕಿ ಬಿದ್ದವರಿದ್ದಾರೆ.
ಕೇರಳದ ಈ ಭೂಪ ಮಾತ್ರ ತಲೆಯನ್ನೇ ಓಡಿಸಿ ತಲೆಯಲ್ಲಿಯೇ ಚಿನ್ನ ಇಟ್ಟು ಸಾಗಿಸೋಕೆ ಮುಂದಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಲೇಟೆಸ್ಟ್ ಹೇರ್ ಸ್ಟೈಲ್ ಥರ ವಿಗ್ ಮಾಡಿ ಅದರಲ್ಲಿ 1.13 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡೋಕೆ ಮುಂದಾಗಿ ಸೆರೆಯಾಗಿದ್ದಾನೆ.
ಕೊಚ್ಚಿನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಚಿನ್ನ ಸಾಗಿಸುತ್ತಿದ್ದ ಖದೀಮನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.