Select Your Language

Notifications

webdunia
webdunia
webdunia
webdunia

ಸಚಿವ ಚೆಲುವರಾಯಸ್ವಾಮಿ‌ ವಿರುದ್ಧ ರಾಜ್ಯಪಾಲರಿಗೆ ದೂರಿಗೆ ಮತ್ತೊಂದು ಟ್ವಿಸ್ಟ್..!

ಸಚಿವ ಚೆಲುವರಾಯಸ್ವಾಮಿ‌ ವಿರುದ್ಧ ರಾಜ್ಯಪಾಲರಿಗೆ ದೂರಿಗೆ ಮತ್ತೊಂದು ಟ್ವಿಸ್ಟ್..!
bangalore , ಮಂಗಳವಾರ, 8 ಆಗಸ್ಟ್ 2023 (17:40 IST)
ಚೆಲುವರಾಯಸ್ವಾಮಿ ವಿರುದ್ದ ರಾಜ್ಯಪಾಲರಿಗೆ ಕೃಷಿ ಅಧಿಕಾರಿಗಳು ದೂರು ನೀಡಿದ್ದಾರೆ ಎಂಬ ವಿಚಾರ ಸಾಕಷ್ಟು ಸಂಚಲನ ಮೂಡಿಸ್ತಿದೆ.. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಪತ್ರ ವಿಪಕ್ಷಗಳಿಗೆ ಬ್ರಹ್ಮಾಸ್ತ್ರವಾಗಿ ಸಿಕ್ಕಿರುವಾಗಲೆ ಇದಕ್ಕೆ ತಿರುಗೇಟು ನೀಡಲು ಸರ್ಕಾರದ ನಾಯಕರು ಸಿದ್ದವಾಗ್ತಿದ್ದಾರೆ.. ರಾಜ್ಯಪಾಲರಿಗೆ ಕೊಟ್ಟಿರುವ ದೂರು ನಕಲಿ ಅಂತಾ ಸಿಎಂ ಸ್ಪಷ್ಟನೆ ಕೊಟ್ಟಿದ್ರು ಹೆಚ್ಚಿನ ತನಿಖೆ ಮಾಡಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.ರಾಜ್ಯ ಸರ್ಕಾರದಕ್ಕೆ ವರ್ಗಾವಣೆ ವಿಚಾರ ಕಂಟಕವಾಗಿ ಸುತ್ತುತ್ತಿರುವಾಗಲೇ ಮತ್ತೊಂದು ಸಂಕಷ್ಟ ಎದುರಾಗಿದೆ.. ಸಚಿವ ಚೆಲುವರಾಯಸ್ವಾಮಿ ವಿರುದ್ದ ಕೃಷಿ ಇಲಾಖೆಯ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕಿ ಇಟ್ಟಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬ ಪತ್ರ ಸಾಕಷ್ಟು ಕಾವು ಮೂಡಿಸ್ತಿದೆ.. ಇದೆ ವಿಚಾರನ್ನಿಟ್ಟುಕೊಂಡು ವಿಪಕ್ಷಗಳು ಸರ್ಕಾರದ ವಿರುದ್ದ ಸಮರಕ್ಕೆ ಸಿದ್ದವಾಗಿವೆ.

ಸಚಿವರ ವಿರುದ್ದ ದೂರಿನ ವಿಚಾರ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ನಿಂತಿದ್ದಾರೆ ಅಂತಾ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಸಿಎಂ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.. ಈ ವಿಚಾರ ಹಾಲಿ ಸಿಎಂ ಹಾಗೂ ಮಾಜಿ ಸಿಎಂಗಳ ನಡುವೆ ಸಮರ‌ ಶುರುವಾದಂತ್ತಾಗಿದೆ.. ಇದು ದೂರಿನ‌ ಪ್ರತಿ ಫೇಕ್ ಅಂತ ಸಿಎಂ ಸಿದ್ದರಾಮಯ್ಯನವರು ಸಚಿವರ ಬೆನ್ನಿಗೆ ನಿಂತಿದ್ದಾರೆ ಎಂದು ಟ್ವಿಟ್ ಮೂಲಕ ಸಿಎಂ‌ ಸಿದ್ದರಾಮಯ್ಯ ವಿರುದ್ದ ಹೆಚ್ ಡಿಕೆ ಕಿಡಿಕಾರಿದ್ದಾರೆ.

ದೂರಿನ ಪ್ರತಿ ವಿಚಾರವಾಗಿ ವಿರೋದ ಪಕ್ಷಗಳ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ ಅವರು ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನ ಗೃಹ ಕಚೇರಿಗೆ ಕರೆಸಿಕೊಂಡು ಇದರ ಸಂಪೂರ್ಣ ಮಾಹಿತಿಯನ್ನ ಪಡೆದಿಕೊಂಡಿದ್ದಾರೆ.. ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ವಿರುದ್ಧ ಬರೆದಿರುವ ಪತ್ರದ ಬಗ್ಗೆ ಪೊಲೀಸರಿಗೆ ತನಿಖೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.. ನಂತರ ಗೃಹ ಸಚಿವ ಡಾ. ಜಿ ಪರಮೇಶ್ವರ್ ಜೊತೆ ಚರ್ಚಿಸಿ ಈ ಪ್ರಕರಣವನ್ನ ಸಿಐಡಿ ಕೊಡುವುದಕ್ಕೆ ಸಿಎಂ ಸಚಿವರಿಗೆ ಸೂಚನೆ ನೀಡಿದ್ರು.. ಈ ಮೂಲಕ ಸರ್ಕಾರದ ವಿರುದ್ಧ ಹಲವಾರು ಆರೋಪಗಳನ್ನ ತಡೆಗಟ್ಟಲು ಸಿಎಂ ಮುಂದಾಗಿದ್ದಾರೆ.. ಇನ್ನೂ ಸುಳ್ಳು ಆರೋಪವನ್ನ ಸಚಿವರ ಮೇಲೆ ಮಾಡುತ್ತಿದ್ದಾರೆ ಈದರ ವಿರುದ್ಧ ಕ್ರಮಗೊಳ್ಳಬೇಕು ಎಂದು ಕಾಂಗ್ರೆಸ್‌ ಪಕ್ಷದ ನಿಯೋಗದಿಂದ ಗೃಹ ಸಚಿವರಿಗೆ ದೂರು ನೀಡಿದ್ದಾರೆ.

ಈ ವಿಚಾರದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಸಚಿವ ಚೆಲುವರಾಯಸ್ವಾಮಿ ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದಾರೆ.. ಶಾಸಕ ನರೇಂದ್ರ ಸ್ವಾಮಿ ಮಾತನಾಡಿ, ಗೌರ್ನರ್ ಕಚೇರಿ ದುರ್ಬಳಕೆ ಮಾಡುವ ಪ್ರಯತ್ನ ನಿನ್ನೆಯಿಂದ ಪ್ರಚಾರ, ಅಪಪ್ರಚಾರ ನಡೆದಿದೆ.. ರಾಜ್ಯಪಾಲರು ಪತ್ರದ ಬಗ್ಗೆ ಸಿಎಸ್ ಗೆ ಬರೆಯುತ್ತಾರೆ.. ಈ ರೀತಿಯಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ.. ನಾವು ಗೃಹ ಸಚಿವರಿಗೆ ಮನವಿ‌ಮಾಡಿದ್ದೇವೆ ಸಿಐಡಿ ತನಿಖೆಗೆ ಕೊಡುವಂತೆ ಮಾಡಿದ್ದೇವೆ ಅಂತಾ ವಿಪಕ್ಷಗಳ ವಿರುದ್ದ ಕಿಡಿಕಾರಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಗಳ ಮೇಲೆ ಒರೆಯಾಗುತ್ತಾ ಶಿಕ್ಷಣ ಇಲಾಖೆಯ ನೂತನ ಚಿಂತನೆ