Select Your Language

Notifications

webdunia
webdunia
webdunia
webdunia

ಶೀಘ್ರದಲ್ಲೇ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಆರಂಭ

ಶೀಘ್ರದಲ್ಲೇ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಆರಂಭ
bangalore , ಸೋಮವಾರ, 7 ಆಗಸ್ಟ್ 2023 (22:00 IST)
ರಾಜ್ಯದಲ್ಲಿ ಕಳೆದ ಎರಡು ತಿಂಗಳ ಹಿಂದೆ ವಿಧಾನಸಭೆ ಚುನಾವಣೆ ಘೊಷಣೆಯಾಗಿದ್ದರಿಂದ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದಗಿನಿಂದ ಸರಕಾರಿ ಸೇವೆ ನೀಲ್ಲಿಸಲಾಗಿತ್ತು. ಅದರಂತೆ ಹಿಗಾಗಿ ಜನರಿಗೆ ಹೊಸ  ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಕೆಗೆ ತುಂಬಾ ತೊಂದರೆ ಯಾಗ್ತಾಯಿತ್ತು.ಇದೆಲ್ಲ ಗಮನದಲ್ಲಿಟ್ಟು ಕೊಂಡು ಇದೀಗ ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಆರಂಭಮಾಡೊದಾಗಿ ಸರ್ಕಾರ ತೀಳಿಸಿದೆ. ಕಾಂಗ್ರೆಸ್ ಜಾರಿ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಪಡಿತರ ಚೀಟಿ ತುಂಬಾ  ಮುಖ್ಯವಾಗಿದ್ದು, ಜನರು ರೇಷನ್ ಕಾರ್ಡ್ಗಾಗಿ ಅಲೆಯುತ್ತಿದ್ದಾರೆ. ಹಿಗಾಗಿ ಸರ್ಕಾರದ ಯೋಜನೆಗಳಿಂದ ಯಾವ ಫಲಾನುಭವಿಗಳು ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಆಹಾರ ಇಲಾಖೆ ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಆರಂಭಮಾಡೊಕೆ ಮುಂದಾಗಿದೆ.

ಇನ್ನೂ  ಆಹಾರ ಇಲಾಖೆಯ ಫೋರ್ಟಲ್ ಸದ್ಯ ಮೊಬೈಲ್‌ ಮಾತ್ರ ಒಪನ್ ಆಗಿದೆ. ಆದ್ರೆ ಇದರಲ್ಲಿ ಅರ್ಜಿ ಸಲ್ಲಿಕೆ ಮಾಡಲು ಆಗುವುದಿಲ್ಲ. ಇದರಿಂದ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಲು ಹೊಸವೆಬ್ ಸೈಟ್ ಡೆವಲಪ್ ಮಾಡಬೇಕು. ತದನಂತರದಲ್ಲಿ ಅರ್ಜಿಸಲ್ಲಿಕೆಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಈಗಾಗಲೇ ಬಿಪಿಎಲ್ ಕಾರ್ಡ್‌ ಪಡೆಯಲು 3 ಲಕ್ಷ ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಕಾರ್ಡ್ ಗಳ ವಿಲೇವಾರಿಯೇ ಇನ್ನು ಬಾಕಿ ಇದೆ. ಈ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಕಾರ್ಡ್‌ ನೀಡಲು ಸರ್ಕಾರ‌ ಮುಂದಾಗಿದೆ. ಇನ್ನೂ 2016ರಲ್ಲಿ BPL ಪಡಿತರ ಚೀಟಿಗೆ ಅರ್ಜಿಸಲ್ಲಿಸೊಕೆ ಯಾರೂ ಅರ್ಹರು ಮತ್ತು ಅರ್ಜಿಸಲ್ಲಿಕೆಗೆ ಆಹಾರ ಇಲಾಖೆ ನಿಗದಿ ಮಾಡಿದ್ದ ಮಾನದಂಡಳು ಏನ್ನೂ ಅಂತಾ ನೊಡೊದಾದ್ರೆ,

1) ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಾಯಂ ನೌಕರರಾಗಿರಬಾರದು
2) ವೃತ್ತಿ ತೆರಿಗೆ, ಜಿಎಸ್‌ಟಿ, ಆದಾಯ ತೆರಿಗೆ ಪಾವತಿದಾರರಾಗಿರಬಾರದು
3) ಗ್ರಾಮೀಣ ಭಾಗದಲ್ಲಿ 3 ಹೆಕ್ಟೇರ್‌ ಗಿಂತ ಹೆಚ್ಚು ಭೂಮಿ ಹೊಂದಿರಬಾರದು
4) ನಗರದಲ್ಲಿ 1,000 ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಇರಬಾರದು
5) ಟ್ರಾಕ್ಟರ್‌, ಕ್ಯಾಬ್‌, ಟ್ಯಾಕ್ಸಿ ಹೊರತಾಗಿ ವೈಟ್ ಬೋರ್ಡ್ ಕಾರು ಹೊಂದಿರಬಾರದು
6) ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚು ಇರುವ ಕುಟುಂಬವಾಗಿರಬಾರದು

ನೊಡಿದ್ರಲ್ಲ ವಿಕ್ಷಕರೆ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸುವವರು ಮೇಲೆ ತಿಳಿಸಲಾದ ಸರ್ಕಾರದ ಮಾನದಂಡಗಳನ್ನ ಮೀರಿ ಅರ್ಜಿಸಲ್ಲಿಕೆ ಮಾಡಿದ್ರೆ ಕಾರ್ಡ್ ಗಳು ರದ್ದಾಗಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ವೈದ್ಯರ ನಿವೃತ್ತಿ ವಯಸ್ಸು 65 ಕ್ಕೆ ಏರಿಸಲು ಚಿಂತನೆ…!