Select Your Language

Notifications

webdunia
webdunia
webdunia
webdunia

ಆಟೋ ಮತ್ತು ಕ್ಯಾಬ್‌ ಡ್ರೈವರ್‌ಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್

cab drivers
bangalore , ಮಂಗಳವಾರ, 8 ಆಗಸ್ಟ್ 2023 (16:36 IST)
ಸರ್ಕಾರ ಇದೀಗ ಆಟೋ ಮತ್ತು ಮ್ಯಾಕ್ಸಿ ಕ್ಯಾಬ್‌ ಡ್ರೈವರ್‌ಗಳಿಗೆ ಒಂದು ಸಿಹಿ ಸುದ್ದಿ ನೀಡ್ತಾಯಿದೆ. ಈಗಾಗಲೇ ಆಪ್‌ ಆಧಾರಿತ ಕೆಲವು ಖಾಸಗಿ ಸಂಸ್ಥೆಗಳು ಆಟೋ ಮತ್ತು ಮ್ಯಾಕ್ಸಿ ಕ್ಯಾಬ್‌ ಚಾಲಕರಿಗಿಂತ ಹೆಚ್ಚಿನ ಲಾಭ ಗಳಿಸುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಸರ್ಕಾರ ರೆಡಿಯಾಗಿದೆ. ಬೆಂಗಳೂರಿನಲ್ಲಿ ಕೆಲವೇ ತಿಂಗಳಲ್ಲಿ ಹೊಸ ಆಪ್‌ ಗೆ  ಚಾಲನೆ ಸಿಗಲಿದೆ.ಈ ಹಿಂದೆ ಆಟೋ ಯೂನಿಯನ್‌ಗಳು ಸಾರಿಗೆ ಸಂಸ್ಥೆಯಿಂದ ಒಂದು ಆಪ್‌ ಸಿದ್ಧಪಡಿಸುವಂತೆ ಒತ್ತಾಯಿಸಿದ್ದವು. ಆಟೋ ಯೂನಿಯನ್‌ಗಳ ಸಭೆಯಲ್ಲೂ ಸರ್ಕಾರವೇ ಆಪ್‌ ಮಾಡಬೇಕೆಂಬ ಬೇಡಿಕೆ ಇತ್ತು. ಆ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಆಪ್‌ ಸಿದ್ಧಪಡಿಸಲು ಒಪ್ಪಿಗೆ ನೀಡಲಾಗಿದೆ. ಈಗಾಗಲೇ ಖಾಸಗಿ ಸಂಸ್ಥೆಗಳು ಹೆಚ್ಚು ಹಣ ಪಡೆದು ಚಾಲಕರಿಗೆ ಕಡಿಮೆ ಹಣ ನೀಡುತ್ತಿವೆ. ಗ್ರಾಹಕರಿಗೆ 850 ರೂಪಾಯಿ ಚಾರ್ಜ್‌ ಮಾಡಿದರೆ ಡ್ರೈವರ್‌ಗಳಿಗೆ 450 ರೂಪಾಯಿ ಸಿಗುತ್ತಿದ್ದು, ನೋ ಲಾಸ್‌, ನೋ ಪ್ರಾಫಿಟ್‌ ಕಾನ್ಸೆಪ್ಟ್ ನಲ್ಲಿ ಆಪ್‌ ಪರಿಚಯಿಸಲು ಪ್ಲಾನ್ ಮಾಡಲಾಗುತ್ತಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಶಿಶುಪಾಲನಾ ಕೇಂದ್ರ ತೆರೆಯುವ ಸರ್ಕಾರದ ನಿರ್ಧಾರಕ್ಕೆ ವಿರೋಧ