Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಗಳ ಮೇಲೆ ಒರೆಯಾಗುತ್ತಾ ಶಿಕ್ಷಣ ಇಲಾಖೆಯ ನೂತನ ಚಿಂತನೆ

ವಿದ್ಯಾರ್ಥಿಗಳ ಮೇಲೆ ಒರೆಯಾಗುತ್ತಾ ಶಿಕ್ಷಣ ಇಲಾಖೆಯ ನೂತನ ಚಿಂತನೆ
bangalore , ಮಂಗಳವಾರ, 8 ಆಗಸ್ಟ್ 2023 (17:00 IST)
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಬದಲಾವಣೆಗಳು ಆಗುತ್ತವೆ. 5 & 8 ತರಗತಿ ಪಬ್ಲಿಕ್ ಪರೀಕ್ಷೆ ನಂತ್ರ ಇದೀಗ ಮತ್ತೊಂದು ಹಂತಕ್ಕೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು ಪೋಷಕರು ಗರಂ ಆಗಿದ್ದಾರೆ. ಮಕ್ಕಳಿಗೆ ಶಿಕ್ಷಣ ತುಂಬಾ ಮುಖ್ಯ. ಹೀಗಾಗಿ ಅಧಿಕಾರಕ್ಕೆ ಬಂದಂತಹ ಸರ್ಕಾರಗಳು ಸಹ ಮಕ್ಕಳ ಶೈಕ್ಷಣಿಕ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು. ಕಳೆದ ವರ್ಷ 5&8 ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಿತ್ತು ಶಿಕ್ಷಣ ಇಲಾಖೆ.  ಇದೀಗ 9&11ನೇ ತರಗತಿಗೆ ಬೋಡ್೯ ಮಾದರಿಯಲ್ಲಿ ಪರೀಕ್ಷೆ ನಡೆಸಲು ಚಿಂತನೆ ನಡೆಸಿದ್ದು, ಪೋಷಕರ ಮಾತ್ರ ಈ ಒಂದು ಚಿಂತನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು 5&8 ತರಗತಿಗೆ ಪಬ್ಲಿಕ್ ಪರೀಕ್ಷೆ ಕಳದ ವರ್ಷದಿಂದ ಜಾರಿಗೆ ತಂದಿದ್ದರು. ಇದಕ್ಕೆ ಪೋಷಕರ ಈ ಒಂದು ಯೋಜನೆ ಸರಿಯಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ 9&11 ನೇ ತರಗತಿಗೂ ಸಹ ಬೋಡ್೯ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಇದು ಏನಾದರೂ ಯೋಜನೆ ಜಾರಿಗೆ ಬಂದ್ರೆ ವಿದ್ಯಾರ್ಥಿಗಳು 9,10,11 ತರಗತಿಗೆ ಬೋಡ್೯ ಪರೀಕ್ಷೆ ಬರೆಯಬೇಕು. ಸದ್ಯ ಈ ಒಂದು ಮಾದರಿ ಗುಜರಾತ್, ಕೇರಳದಲ್ಲಿ ಅನುಷ್ಠಾನಕ್ಕೆ ಬಂದಿದೆ. ನಮ್ಮ ರಾಜ್ಯದಲ್ಲಿ ಸಹ ಅಳವಡಿಕೆ ಮಾಡುವ ಶಿಕ್ಷಣ ಇಲಾಖೆ ಮುಂದಾಗಿದೆ.

ಇನ್ನೂ ಈ ಮಾದರಿಗೆ ಪೋಷಕರು ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 9&11 ತರಗತಿಗೆ ಬೋಡ್೯ ಪರೀಕ್ಷೆ ತರಲು ಮುಂದಾಗಿದ್ದು ಸರಿಯಲ್ಲ. ವಿದ್ಯಾರ್ಥಿಗಳು 5,8,9,10,11 ತರಗತಿಗಳಿಗೆ ಬೋಡ್೯ ಪರೀಕ್ಷೆ ಬರಿಯಬೇಕು. ಇದ್ರಿಂದ ವಿದ್ಯಾರ್ಥಿಗಳಿಗೆ ಒತ್ತಡ ಜಾಸ್ತಿ ಆಗುತ್ತೆ. ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗ್ತಾರೆ. ಹೀಗೆ ಮಕ್ಕಳನ್ನ ಆಟ ಜೊತೆಗೆ ಬೇರೆ ಬೇರೆ ಚಟುವಟಿಕೆಗಳಿಗೆ ಮಾಡೊದಕ್ಕೆ ಪೋಷಕರು ಬಿಡ್ತಿಲ್ಲ. ಟ್ಯೂಷನ್, ಎಕ್ಸ್ಟ್ರಾ ಕ್ಲಾಸ್ ಅಂತ ಮಕ್ಕಳನ್ನ ಕಳಿಸ್ತಿದ್ದಾರೆ. ಹೀಗಾಗಿ ಇದನ್ನ ಕೈಬಿಡಬೇಕೆಂದು ಒತ್ತಾಯ ಮಾಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಆಟೋ ಮತ್ತು ಕ್ಯಾಬ್‌ ಡ್ರೈವರ್‌ಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್