Select Your Language

Notifications

webdunia
webdunia
webdunia
Wednesday, 9 April 2025
webdunia

ನ್ಯಾಷನಲ್ ಕಾಲೇಜು ಮೈದಾನದತ್ತ ಅನಂತ ಯಾತ್ರೆ

ಅನಂತ ಕುಮಾರ್
ಬೆಂಗಳೂರು , ಮಂಗಳವಾರ, 13 ನವೆಂಬರ್ 2018 (10:22 IST)
ಬೆಂಗಳೂರು: ನಿನ್ನೆ ವಿಧಿವಶರಾದ ಕೇಂದ್ರ ಸಚಿವ ಅನಂತ ಕುಮಾರ್ ಪಾರ್ಥಿವ ಶರೀರ ಇದೀಗ ಮಲ್ಲೇಶ್ವರ ಬಿಜೆಪಿ ಕಚೇರಿಯಿಂದ ನ್ಯಾಷನಲ್ ಕಾಲೇಜು ಮೈದಾನದತ್ತ ಸಾಗಿದೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನದ ಬಳಿಕ ಇದೀಗ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕೆಲ ಕಾಲ ಸಾರ್ವಜನಿಕ ದರ್ಶನಕ್ಕೆ ಕರೆದೊಯ್ಯಲಾಗುತ್ತಿದೆ.

ಹೂವುಗಳಿಂದ ಅಲಂಕೃತಗೊಂಡ ಸೇನಾ ವಾಹನದಲ್ಲಿ ಅನಂತ ಕುಮಾರ್ ಪಾರ್ಥಿವ ಶರೀರವನ್ನು ಕರೆದೊಯ್ಯಲಾಗುತ್ತಿದೆ. ಇದೇ ಮೈದಾನದಲ್ಲಿ ಹಲವು ಬಾರಿ ಅನಂತ ಕುಮಾರ್ ರಾಜಕೀಯ ರ್ಯಾಲಿಗಳಲ್ಲಿ ಮಾತನಾಡಿದ್ದರು. ಇಂದು ಅದೇ ಮೈದಾನದಲ್ಲಿ ಅವರ ಪಾರ್ಥಿವ ಶರೀರ ಶಾಂತವಾಗಿ ಮಲಗಿರುವುದನ್ನು ನೋಡಲು ಅದೆಷ್ಟೋ ಮಂದಿ ಆಗಮಿಸುವಂತಾಗಿದೆ. ಇಲ್ಲಿ ಅಂತಿಮ ದರ್ಶನದ ಬಳಿಕ ಚಾಮರಾಜಪೇಟೆಯ ರುದ್ರಭೂಮಿಗೆ ಅಂತಿಮ ಯಾತ್ರೆ ನಡೆಯಲಿದ್ದು, ಅಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಯ ಬಾರಿಗೆ ಒಮ್ಮೆ ಅನಂತ ಕುಮಾರ್ ನೋಡಲು ಬರುತ್ತಾರಾ ರಾಜಕೀಯ ಗುರು?!